IPL 2022 | ರಾಹುಲ್ ತಂಡಕ್ಕೆ ಆಸೀಸ್ ಸ್ಪೀಡ್ ಸ್ಟಾರ್
ಇಂಡಿಯನ್ ಪ್ರಿಮಿಯರ್ ಲೀಗ್ ನ ಹೊಸ ತಂಡ ಲಕ್ನೋ ಸೂಪರ್ ಜೈಂಟ್ಸ್ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಂಡಿದೆ.
ತಂಡದ ಸ್ಟಾರ್ ವೇಗಿ ಮಾರ್ಕ್ ವುಡ್ ಗಾಯದ ಸಮಸ್ಯೆಯಿಂದಾಗಿ ಈ ವರ್ಷದ ಐಪಿಎಲ್‌ನಿಂದ ಹೊರಗುಳಿದಿದ್ದಾರೆ.
ಹೀಗಾಗಿ ಮಾರ್ಕ್ ವುಡ್ ಬದಲಿಗೆ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸಿ ಆಸ್ಟ್ರೇಲಿಯಾದ ವೇಗಿ ಆಂಡ್ರ್ಯೂ ಟೈ ಅವರೊಂದಿಗೆ ಒಪ್ಪಂದ ಕುದುರಿಸಿಕೊಂಡಿದೆ.
ಲಕ್ನೋ ಫ್ರಾಂಚೈಸ್ ಇದನ್ನು ಸಾಮಾಜಿಕ ಮಾಧ್ಯಮ ವೇದಿಕೆಯಾಗಿ ದೃಢಪಡಿಸಿದೆ.
ಐಪಿಎಲ್ ಮೆಗಾ ಹರಾಜಿನ ಭಾಗವಾಗಿ ಲಕ್ನೋ ಫ್ರಾಂಚೈಸಿ ಮಾರ್ಕ್ ವುಡ್ ಅವರನ್ನು 7.5 ಕೋಟಿಗೆ ಖರೀದಿಸಿತ್ತು.
ಆದರೆ, ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ವುಡ್ ಗಾಯಗೊಂಡಿದ್ದರು. ಇದರೊಂದಿಗೆ ವಿಂಡೀಸ್ ಜೊತೆಗಿನ ಟೆಸ್ಟ್ ಮತ್ತು ಐಪಿಎಲ್ ನಿಂದ ವುಡ್ ದೂರ ಉಳಿದಿದ್ದಾರೆ.
ಇತ್ತ ಐಪಿಎಲ್-2022 ಮೆಗಾ ಹರಾಜಿನಲ್ಲಿ ಕನಿಷ್ಠ 1 ಕೋಟಿ ರೂ.ಗೆ ಟೈ ತಮ್ಮ ಹೆಸರನ್ನ ನೊಂದಾಯಿಸಿಕೊಂಡಿದ್ದರು.
ಆದರೆ ಯಾವುದೇ ಫ್ರಾಂಚೈಸಿಯು ಅವರನ್ನ ಖರೀದಿಸಲು ಆಸಕ್ತಿ ತೋರಲಿಲ್ಲ. ಹೀಗಾಗಿ ಟೈ ಅನ್ ಸೋಲ್ಡ್ ಆದರು.
ಇದೀಗ ಲಕ್ನೋ ಫ್ರಾಂಚೈಸಿ ಟೈ ಅವರನ್ನು ಕನಿಷ್ಠ ಬೆಲೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ಅಂದಹಾಗೆ ಟೈ 2018 ರಲ್ಲಿ, ಪಂಜಾಬ್ ಕಿಂಗ್ಸ್ (ಕಿಂಗ್ಸ್ XI ಪಂಜಾಬ್) ತಂಡವನ್ನ ಪ್ರತಿನಿಧಿಸಿದ್ದರು.
ಐಪಿಎಲ್ ನಲ್ಲಿ ಇದುವರೆಗೆ 27 ಪಂದ್ಯಗಳನ್ನು ಆಡಿರುವ ಟೈ 40 ವಿಕೆಟ್ ಪಡೆದಿದ್ದಾರೆ. ipl-2022-andrew-tye-joins-lucknow-super-giants