IPL 2022 | ಈ ಸಲ ಡೆಲ್ಲಿಯದ್ದೇ ಕಪ್ ಎಂದ ಸನ್ನಿ
14 ವರ್ಷಗಳಿಂದ ಒಂದು ಲೆಕ್ಕಾ… ಈಗ ಒಂದು ಲೆಕ್ಕಾ ಎಂಬಂತೆ 15ನೇ ಆವೃತ್ತಿಯ ಐಪಿಎಲ್ ನಲ್ಲಿ ಹೊಸ ಹೊಸ ಬೆಳವಣಿಗೆಗಳು ನಡೆಯುತ್ತಿವೆ.
ಈ ಬಾರಿ ಹೊಸ ತಂಡಗಳ ಸೇರ್ಪಡೆ ಜೊತೆಗೆ ಹೊಸ ನಾಯಕರು ಕೂಡ ಬಂದಿದ್ದಾರೆ. ಹೀಗಾಗಿ ಈ ಬಾರಿಯ ಚಾಂಪಿಯನ್ ಯಾರು ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಇದೇ ವಿಚಾರವಾಗಿ ಸುನೀಲ್ ಗವಾಸ್ಕರ್ ಮಾತನಾಡುತ್ತಾ, ಈ ಸಲ ಕಪ್ ಡೆಲ್ಲಿಯದ್ದು ಎಂದಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಈ ಬಾರಿ ಕಪ್ ಗೆಲ್ಲುವ ಅವಕಾಶಗಳಿವೆ.
ರಿಷಬ್ ಪಂತ್ ನೇತೃತ್ವದಲ್ಲಿ ಡೆಲ್ಲಿ ತಂಡ ಟೈಟಲ್ ಗೆಲ್ಲಲು ತಂಡಗಳಲ್ಲಿ ಒಂದಾಗಿದೆ. ಪಂತ್ ಕ್ಯಾಪ್ಟನ್ಸಿ ಡೆಲ್ಲಿ ತಂಡಕ್ಕೆ ಚೊಚ್ಚಲ ಕಪ್ ತಂದುಕೊಡಲಿದೆ ಎಂದಿದ್ದಾರೆ.
ಕಳೆದ ವರ್ಷ ಪಂತ್ ನಮ್ಮ ಪ್ರತಿಭೆಯಿಂದ ಡೆಲ್ಲಿ ತಂಡವನ್ನು ಪ್ಲೇ ಆಫ್ ಗೆ ತೆಗೆದುಕೊಂಡು ಹೋಗಿದ್ದರು. ಹೀಗಾಗಿ ಅವರ ಆತ್ಮವಿಶ್ವಾಸ ಹೆಚ್ಚಾಗಿದೆ.
ಜೊತೆಗೆ ಟೀಂ ಇಂಡಿಯಾ ಪರ ಇತ್ತೀಚೆಗೆ ಉತ್ತಮವಾದ ಪ್ರದರ್ಶನ ನೀಡುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಬಲಿಷ್ಠವಾಗಿದೆ. ಹೀಗಾಗಿ ಈ ಬಾರಿ ಡೆಲ್ಲಿಗೆ ಮೊದಲ ಪ್ರಶಸ್ತಿ ಗೆಲ್ಲುವ ಉತ್ತಮ ಅವಕಾಶವಿದೆ ಎಂದಿದ್ದಾರೆ.
ಮಾರ್ಚ್ 27 ರಂದು ಡೆಲ್ಲಿ ತನ್ನ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಲಿದೆ. ipl-2022-delhi-might-win-maiden-title-time