IPL 2022 | ಆರ್ ಸಿಬಿಗೆ ಮಾರ್ಗನ್ ಕ್ಯಾಪ್ಟನ್.. ಏನ್ ಹೇಳ್ತೀರಾ..?
IPL-2022 ಮೆಗಾ ಹರಾಜಿನಲ್ಲಿ ಇಂಗ್ಲೆಂಡ್ ಸೀಮಿತ ಓವರ್ಗಳ ನಾಯಕ ಇಯಾನ್ ಮಾರ್ಗನ್ ಗಾಗಿ ಮೂರು ತಂಡಗಳು ಪೈಪೋಟಿ ನಡೆಸಲಿವೆ.
ಕೋಲ್ಕತ್ತಾ ನೈಟ್ ರೈಡರ್ಸ್ ಹರಾಜಿಗೂ ಮುನ್ನ ಮಾರ್ಗನ್ ಅವರನ್ನು ಉಳಿಸಿಕೊಳ್ಳಲಿಲ್ಲ.
ಹರಾಜಿನಲ್ಲಿ 1.5 ಕೋಟಿ ಬೇಸ್ ಫ್ರೈಸ್ ನಲ್ಲಿ ಮಾರ್ಗನ್ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ.
ಕಳೆದ ಕೆಲವು ದಿನಗಳಿಂದ ಅವರು ಪಾರ್ಮ್ ನಲ್ಲಿಲ್ಲದಿದ್ದರೂ ನಾಯಕನಾಗಿ ಅನುಭವ ಇರುವ ಕಾರಣ ಫ್ರಾಂಚೈಸಿಗಳು ಅವರ ಖರೀದಿಗೆ ಮುಗಿಬೀಳಲಿವೆ.
ಮುಖ್ಯವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ, ಹರಾಜಿನಲ್ಲಿ ಮಾರ್ಗನ್ ಅವರನ್ನು ಖರೀದಿಸಲು ಪ್ಲಾನ್ ಮಾಡಿಕೊಂಡಿದೆಯಂತೆ.
ವಿರಾಟ್ ಕೊಹ್ಲಿ ಆರ್ ಸಿಬಿ ಕ್ಯಾಪ್ಟನ್ಸಿಯಿಂದ ಕೆಳಗಿಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರ್ಗನ್ ಅವರನ್ನ ಖರೀದಿಸಿ, ಕ್ಯಾಪ್ಟನ್ಸಿ ಜವಾಬ್ದಾರಿಯನ್ನು ನೀಡಲು ಆರ್ ಸಿಬಿ ಯಾಜಮಾನ್ಯ ಭಾವಿಸಿದೆಯಂತೆ.
ಮತ್ತೊಂದು ಕಡೆ ಪಂಜಾಬ್ ಕಿಂಗ್, ಸನ್ ರೈಸರ್ಸ್ ಹೈದರಾಬಾದ್ ಕೂಡ ಮಾರ್ಗನ್ ಗೆ ಬಲೆ ಬೀಸಲಿದೆ ಅನ್ನೋ ಮಾಹಿತಿ ಕ್ರೀಡಾ ವಲಯದಲ್ಲಿ ಹರಿದಾಡುತ್ತಿದೆ.