IPL 2022 | ಜೋಸ್ ಬಟ್ಲರ್ ಅಬ್ಬರ.. ಥ್ರಿಲ್ಲಿಂಗ್ ಫೈಟ್ ನಲ್ಲಿ ಗೆದ್ದ ರಾಯಲ್ಸ್

1 min read
ipl-2022-Highlights IPL 2022 DC vs RR Match 34 saaksha tv

IPL 2022 | ಜೋಸ್ ಬಟ್ಲರ್ ಅಬ್ಬರ.. ಥ್ರಿಲ್ಲಿಂಗ್ ಫೈಟ್ ನಲ್ಲಿ ಗೆದ್ದ ರಾಯಲ್ಸ್

ಭಾರಿ ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಗೆಲುವು ಸಾಧಿಸಿದೆ. ಇದರೊಂದಿಗೆ 10 ಅಂಕಗಳೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಎರಡು ತಂಡಗಳು ಸಮಬಲದ ಕಾದಾಟ ನಡೆಸಿದವು. ಟಾಸ್ಸೋತು ಮೊದಲು ಬ್ಯಾಟ್ಮಾಡಿದ ರಾಜಸ್ಥಾನ್ರಾಯಲ್ಸ್‌ 20 ಓವರ್ಗಳಲ್ಲಿ  2 ವಿಕೆಟ್ ನಷ್ಟಕ್ಕೆ 222 ರನ್ ಗಳಿಸಿತು.ಈ ಸವಾಲಿನ ಮೊತ್ತವನ್ನ ಎದುರಿಸಿದ ಡೆಲ್ಲಿ ಕ್ಯಾಪಿಟಲ್ಸ್‌, ಕೊನೆ ಹಂತದವರೆಗೂ ಗೆಲುವಿಗಾಗಿ ಹೋರಾಟ ನಡೆಸಿದರು. ಆದ್ರೆ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 207 ರನ್ಗಳಿಸುವ ಮೂಲಕ 15 ರನ್ಗಳ ಸೋಲೊಪ್ಪಿಕೊಂಡಿತು.  

223 ರನ್ಗಳ ಕಠಿಣ ಟಾರ್ಗೆಟ್ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ತಂಡಕ್ಕೆ ಉತ್ತಮ ಆರಂಭಿ ಸಿಕ್ತು.   ವಾರ್ನರ್ 28 ರನ್, ಪೃಥ್ವಿ ಶಾ 37 ರನ್ ಗಳಿಸಿದರು.  ಆದರೆ ನಂತರ ಬಂದ ಸರ್ಫರಾಜ್ಖಾನ್‌ 1 ರನ್ ಗೆ ಪೆವಿಲಿಯನ್ ಸೇರಿಕೊಂಡರು. ಈ ಹಂತದಲ್ಲಿ ಜೊತೆಯಾದ ರಿಷಬ್ ಪಂತ್ ಮತ್ತು ಲಲಿತ್ ಯಾದವ್ ಜವಾಬ್ದಾರಿಯುತ ಆಟವಾಡಿದರು. ಆದ್ರೆ ಪಂತ್ ಹೋರಾಟ 44 ರನ್ ಗಳಿಗೆ ಮುಕ್ತಾಯವಾಯ್ತು. ಲಲಿತ್ ಯಾದವ್ ಆಟ 37 ರನ್ ಗಳಿಗೆ ಕೊನೆಗೊಂಡಿತು. ಅಕ್ಷರ್ ಪಟೇಲ್, ಶರ್ದೂಲ್ ಠಾಕೂರ್ ಬೇಗ ಪೆವಿಲಿಯನ್ ಸೇರಿಕೊಂಡರು.

ipl-2022-Highlights IPL 2022 DC vs RR Match 34 saaksha tv

ಆದ್ರೆ ಕೊನೆಯ ಓವರ್ ನಲ್ಲಿ ಡೆಲ್ಲಿಗೆ ಗೆಲ್ಲಲು 36 ರನ್ ಗಳ ಅವಶ್ಯಕತೆ ಇತ್ತು. ಒಬೆಡ್ ಮೆಕಾಯ್ ಮಾಡಿದ 20ನೇ ಓವರ್ ನಲ್ಲಿ ಮೊದಲ ಮೂರು ಎಸೆತಗಳಿಗೆ ಪೋವಲ್ ಮೂರು ಸಿಕ್ಸರ್ ಸಿಡಿಸಿದರು. ಈ ಹಂತದಲ್ಲಿ ನೋ ಬಾಲ್ ಕುರಿತಂತೆ ಕೆಲ ಸಮಯ ಗೊಂದಲ ಉಂಟಾಯ್ತು. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 207 ರನ್ ಗಳಿಗೆ ಹೋರಾಟ ಅಂತ್ಯಗೊಳಿಸಿತು.

ರಾಜಸ್ಥಾನ್ರಾಯಲ್ಸ್ಪರ ಪ್ರಸಿದ್ಧ್ಕೃಷ್ಣ ಮೂರು ವಿಕೆಟ್ ಪಡೆದರು. ರವಿಚಂದ್ರನ್ಅಶ್ವಿನ್‌ 2 ವಿಕೆಟ್ ಪಡೆದರು.

 ಇದಕ್ಕೂ ಮೊದಲು ಟಾಸ್ಸೋತು  ಬ್ಯಾಟಿಂಗ್ಅವಕಾಶ ಪಡೆದ ರಾಜಸ್ಥಾನ್ಪರ ಆರಂಭಿಕರಾಗಿ ಕಣಕ್ಕಿಳಿದ ಜಾಸ್ ಬಟ್ಲರ್ಈ ಆವೃತ್ತಿಯ ಮೂರನೇ ಶತಕ ಸಿಡಿಸಿದರು. 65 ಎಸೆತಗಳಲ್ಲಿ ಬಟ್ಲರ್ 116 ರನ್ ಗಳಿಸಿದರು.  ಇವರಿಗೆ ಉತ್ತಮ ಸಾಥ್ನೀಡಿದ ದೇವದತ್ಪಡಿಕ್ಕಲ್‌ 54 ರನ್ಮೂಲಕ ಅರ್ಧಶತಕ ಬಾರಿಸಿ ಮಿಂಚಿದರು. ಇವರಿಬ್ಬರು ಮೊದಲ ವಿಕೆಟ್ಗೆ 155 ರನ್ಭರ್ಜರಿ ಆರಂಭ ಒದಗಿಸಿದರು. ನಂತರ ಬಂದ ನಾಯಕ ಸಂಜೂ ಸ್ಯಾಮ್ಸನ್‌ 46* ರನ್ಮೂಲಕ ತಂಡದ ಮೊತ್ತವನ್ನ 222ಕ್ಕೆ ಏರಿಸಿದರು.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd