IPL 2022 | ರಾಣಾಗೆ ದಂಡ, ಬುಮ್ರಾಗೆ ವಾರ್ನಿಂಗ್!
ಐಪಿಎಲ್-2022 ರ ಅಂಗವಾಗಿ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ವೇಳೆ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಆಟಗಾರ ನಿತೀಶ್ ರಾಣಾಗೆ ದಂಡ ವಿಧಿಸಲಾಗಿದೆ.
ಪರಿಣಾಮ ಅವರ ಪಂದ್ಯದ ಶುಲ್ಕದಲ್ಲಿ ಶೇ.10ರಷ್ಟು ಕಡಿತವಾಗಿದೆ. KKR ಇನ್ನಿಂಗ್ಸ್ನಲ್ಲಿ ಮುರುಗನ್ ಅಶ್ವಿನ್ 12ನೇ ಓವರ್ ಬೌಲ್ ಮಾಡಿದರು..
ರಾಣಾ ಮಿಡ್ ವಿಕೆಟ್ ಕಡೆಗೆ ಭಾರಿ ಶಾಟ್ ಗೆ ಪ್ರಶ್ನಿಸಿದರು. ಆದರೆ ಚೆಂಡು ನೇರವಾಗಿ ಫೀಲ್ಡರ್ ಡೇನಿಯಲ್ ಶಾಮ್ಸ್ ಕೈ ಸೇರಿತು.
ಇದರಿಂದ ತಾಳ್ಮೆ ಕಳೆದುಕೊಂಡ ರಾಣಾ ಪೆವಿಲಿಯನ್ ಗೆ ತೆರಳಿ ತಮ್ಮ ಬ್ಯಾಟ್ ನಿಂದ ಬೌಂಡರಿ ಗೆರೆಯಿಂದ ಹೊರಗಿರುವ ಜಾಹೀರಾತು ಫಲಕಕ್ಕೆ ಹೊಡೆದರು.
ಹೀಗಾಗಿ ರಾಣಾ ಲೆವೆಲ್-1 ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಮ್ಯಾಚ್ ರೆಫರಿ ಕ್ರಮ ಕೈಗೊಂಡಿದ್ದಾರೆ.
ಇದೇ ವೇಳೆ ಮುಂಬೈ ಇಂಡಿಯನ್ಸ್ ತಂಡದ ಸ್ಟಾರ್ ಬೌಲರ್ ಜಸ್ ಪ್ರೀತ್ ಬುಮ್ರಾ ಕೂಡ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಮ್ಯಾಚ್ ರೆಫರಿ ಛೀಮಾರಿ ಹಾಕಿದ್ದಾರೆ.
ಬುಮ್ರಾ ಕೂಡ ತಮ್ಮ ತಪ್ಪೊಪ್ಪಿಕೊಂಡಿದ್ದಾರೆ. ಆದರೆ, ಬುಮ್ರಾ ಎಲ್ಲಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಐಪಿಎಲ್ ಆಯೋಜಕರು ಸ್ಪಷ್ಟಪಡಿಸಿಲ್ಲ.
ಇನ್ನು ಪಂದ್ಯದ ವಿಚಾರಕ್ಕೆ ಬಂದರೇ KKR ತಂಡ ಮುಂಬೈ ಇಂಡಿಯನ್ಸ್ ವಿರುದ್ಧ ಐದು ವಿಕೆಟ್ ಗಳಿಂದ ಗೆಲುವು ಕಂಡಿದೆ. ipl-2022-jasprit-bumrah-nitish-rana-penalised-breaching-code-conduct