IPL 2022 | ಆರ್ ಸಿಬಿ ವಿರುದ್ಧ ಸೋಲಿನ ಬೆನ್ನಲ್ಲೆ ಆರ್ ಆರ್ ಗೆ ಶಾಕ್..!!
1 min read
IPL 2022 | ಆರ್ ಸಿಬಿ ವಿರುದ್ಧ ಸೋಲಿನ ಬೆನ್ನಲ್ಲೆ ಆರ್ ಆರ್ ಗೆ ಶಾಕ್..!!
ಆರ್ಸಿಬಿ ವಿರುದ್ಧ ಸೋತು ಆಘಾತಕ್ಕೆ ಒಳಗಾಗಿದ್ದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಭಾರಿ ಆಘಾತ ಎದುರಾಗಿದೆ.
ಆಸ್ಟ್ರೇಲಿಯದ ಸ್ಟಾರ್ ಬೌಲರ್ ನಾಥನ್ ಕೌಲ್ಟರ್ ನೀಲ್ ಗಾಯದ ಸಮಸ್ಯೆಯಿಂದಾಗಿ ಈ ಋತುವಿನ ಉಳಿದ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ.
ಈ ವಿಚಾರವನ್ನು ರಾಜಸ್ಥಾನ ಫ್ರಾಂಚೈಸಿ ಸ್ವತಃ ಟ್ವಿಟ್ಟರ್ ವೇದಿಕೆಯಾಗಿ ಘೋಷಿಸಿದೆ.
ಈ ಸೀಸನ್ ನ ಮೊದಲ ಪಂದ್ಯ SRH ವಿರುದ್ಧ ಕೌಲ್ಟರ್ ನೀಲ್ ಕಣಕ್ಕಿಳಿಸಿದ್ದರು. ಅದೇ ಪಂದ್ಯದಲ್ಲಿ ಕೊನೆಯ ಓವರ್ ಬೌಲಿಂಗ್ ಮಾಡುವಾಗ ನೀಲ್ ಗಾಯಗೊಂಡಿದ್ದರು.
ಸದ್ಯ ಗಾಯದ ತೀವ್ರತೆ ಹೆಚ್ಚಾಗಿದ್ದು, ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಇನ್ನು ಎಸ್ ಆರ್ ಎಚ್ ವಿರುದ್ಧದ ಪಂದ್ಯದಲ್ಲಿ 3 ಓವರ್ ಬೌಲ್ ಮಾಡಿದ ಕೌಲ್ಟರ್ ನೀಲ್ 48 ರನ್ ನೀಡಿ ಒಂದೇ ಒಂದು ವಿಕೆಟ್ ಪಡೆದಿರಲಿಲ್ಲ. ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಭರ್ಜರಿ ಗೆಲುವು ಸಾಧಿಸಿತ್ತು.
ಐಪಿಎಲ್ ಮೆಗಾ ಹರಾಜಿನಲ್ಲಿ ರಾಜಸ್ಥಾನ ಫ್ರಾಂಚೈಸಿಯು ನಾಥನ್ ಕೌಲ್ಟರ್ ನೀಲ್ ಅವರನ್ನು 2 ಕೋಟಿ ರೂ. ಕೊಟ್ಟು ಖರೀದಿ ಮಾಡಿದೆ.
ಕೌಲ್ಟರ್ ನೀಲ್ ಐಪಿಎಲ್ನಲ್ಲಿ 38 ಪಂದ್ಯಗಳನ್ನು ಆಡಿದ್ದು, 48 ವಿಕೆಟ್ಗಳನ್ನು ಪಡೆದಿದ್ದಾರೆ. ipl-2022-nathan-coulter-nile-ruled-out-ipl-2022