IPL 2022 : ಐಪಿಎಲ್ ನಲ್ಲಿ RCB ಲೆಕ್ಕಾಚಾರ ಹೇಗಿದೆ..
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15 ನೇ ಆವೃತ್ತಿಯಲ್ಲಿ ಪ್ಲೇ ಆಫ್ ಗೆ ಎಂಟ್ರಿ ಪಡೆದುಕೊಂಡಿದೆ. ವಾಂಖೇಡೆ ಅಂಗಳದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸೋಲುಂಡಿದೆ.
ಪರಿಣಾಮ ರಿಷಬ್ ಪಂತ್ ಬಳಕ ಅಂತಿಮ ನಾಲ್ಕರ ಘಟ್ಟ ತಲುಪದೇ ಈ ಆವೃತ್ತಿಯ ಜರ್ಸಿ ಮುಗಿಸಿದೆ. ಇತ್ತ ಡೆಲ್ಲಿ ಸೋಲಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ಸ್ ಗೆ ಎಂಟ್ರಿ ಪಡೆದುಕೊಂಡಿದೆ.
ಆ ಮೂಲಕ ಇಂಡಿಯನ್ ಪ್ರಿಮಿಯರ್ ಲೀಗ್ ಇತಿಹಾಸದಲ್ಲಿ ಎಂಟನೇ ಬಾರಿಗೆ ಅಂತಿಮ ನಾಲ್ಕರ ಘಟ್ಟ ತಲುಪಿದೆ. ಅಲ್ಲದೇ ಸತತ ಮೂರನೇ ಬಾರಿಗೆ ಪ್ಲೇ ಆಫ್ಸ್ ಗೆ ಎಂಟ್ರಿಕೊಟ್ಟಿದೆ.
ಹೌದು..! ಇಂಡಿಯನ್ ಪ್ರಿಮಿಯರ್ ಲೀಗ್ ಇತಿಹಾಸದಲ್ಲಿ ಮುಂಬೈ ಇಂಡಿಯನ್ಸ್ 5 ಬಾರಿ ಚಾಂಪಿಯನ್ ಆಗಿದ್ದು ಗೊತ್ತೇ ಇದೆ.
ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಪ್ಲೇ-ಆಫ್ ಮತ್ತು ಫೈನಲ್ ಮಿಸ್ ಮಾಡಿಕೊಂಡಿದ್ದು ಅಪರೂಪ.
ಆದ್ರೆ ಕಳೆದ 14 ಸೀಸನ್ ಗಳಿಂದ ಆರ್ ಸಿಬಿ ಕಪ್ ಗೆಲ್ಲದೆ ಪರದಾಡುತ್ತಿದೆ. ಅಚ್ಚರಿ ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇ-ಆಫ್ ಹಂತವನ್ನು ಹಲವು ಬಾರಿ ತಲುಪಿದೆ. ಆದರೆ ಕೊನೆಯಲ್ಲಿ ಎಡವಿದ್ದು ಆರ್ ಸಿಬಿಯನ್ನು ಕಪ್ಗಾಗಿ ಪರದಾಡುವಂತೆ ಮಾಡಿದೆ.
ಇದೀಗ ಆರ್ ಸಿಬಿ ತಂಡ ಎಂಟನೇ ಬಾರಿಗೆ ಪ್ಲೇ ಆಫ್ಸ್ ತಲುಪಿದ್ದು, ಕಪ್ ಗೆಲ್ಲುವ ವಿಶ್ವಾಸದಲ್ಲಿದೆ.
ಆದ್ರೆ ಆರ್ಸಿಬಿಗೆ ಎಲಿಮಿನೇಟರ್ನಲ್ಲಿ ಲಖನೌ ಸೂಪರ್ ಜೈಂಟ್ಸ್ ಸವಾಲು ಹಾಕಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯುವ ಈ ಪಂದ್ಯ ಆರ್ಸಿಬಿಯ ಫೈನಲ್ ಎಂಟ್ರಿಗೆ ಮತ್ತೊಂದು ಹೆಜ್ಜೆ.
ಆರ್ಸಿಬಿ ಫೈನಲ್ ಎಂಟ್ರಿ ಪಡೆಯಬೇಕಾದರೆ ಇನ್ನೂ ಎರಡು ಪಂದ್ಯ ಗೆಲ್ಲಬೇಕು. ಎಲಿಮಿನೇಟರ್ನಲ್ಲಿ ಲಖನೌ ಸವಾಲು ಗೆದ್ದ ಮೇಲೆ, ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಕ್ವಾಲಿಫೈಯರ್ನಲ್ಲಿ ಸೋತ ತಂಡ ಎದುರಾಗಲಿದೆ.
ಇಲ್ಲಿ ಗೆದ್ದರೆ ಮಾತ್ರ ಫೈನಲ್ ಸ್ತಾನ ಪಕ್ಕಾ. ಅಂದಹಾಗೇ, ಆರ್ಸಿಬಿ 8 ಸೀಸನ್ಗಳಲ್ಲಿ ಪ್ಲೇ-ಆಫ್ ತಲುಪಿದ 3ನೇ ತಂಡವಾಗಿದೆ. ಮುಂಬೈ ಮತ್ತು ಚೆನ್ನೈ ಈ ಸಾಧನೆ ಮಾಡಿದ ಮೊದಲ 2 ತಂಡಗಳಾಗಿವೆ.
ಆರ್ಸಿಬಿ ಪ್ಲೇ-ಆಫ್ ಲೆಕ್ಕ ನೋಡೊದಾದ್ರೆ.. 2009 ರಲ್ಲಿ ರನ್ನರ್ ಅಪ್ ಆಗಿದ್ದ ಆರ್ ಸಿಬಿ, 2010 ಪ್ಲೇ-ಆಫ್, 2011ರಲ್ಲಿ ಮತ್ತೆ ರನ್ನರ್ ಅಪ್, 2015ರಲ್ಲಿ ಅಂತಿಮ ನಾಲ್ಕರ ಘಟ್ಟ, 2016ರಲ್ಲಿ ರನ್ನರ್ ಅಪ್ ಆಗಿತ್ತು. ಆದ್ರೆ ಕಳೆದ ಮೂರು ವರ್ಷಗಳಿಂದ ಬೆಂಗಳೂರು ತಂಡ ಸತತವಾಗಿ ಪ್ಲೇ ಆಫ್ಸ್ ಗೆ ಎಂಟ್ರಿ ಕೊಟ್ಟಿದೆ. ipl-2022-rcb qualify for playoffs 2022