ಐಪಿಎಲ್ 2022 | 14 ಕೋಟಿಗೆ ಸಂಜು ಸ್ಯಾಮನ್ಸ್ ಡೀಲ್ ಫಿಕ್ಸ್..! Sanju Sammons saaksha tv
ಐಪಿಎಲ್ 2022 ಸೀಸನ್ಗಾಗಿ ಮೆಗಾ ಹರಾಜಿನ ಸಮಯ ಸಮೀಪಿಸುತ್ತಿದ್ದಂತೆ, ಆಯಾ ತಂಡಗಳು ರಿಟೈನ್ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸುತ್ತಿವೆ. ನವೆಂಬರ್ 30 ರೊಳಗೆ ತಂಡಗಳು ಈ ಪಟ್ಟಿಯನ್ನು ಸಲ್ಲಿಸಬೇಕು.
ಈ ಮಧ್ಯೆ ರಾಜಸ್ಥಾನ್ ತಂಡದ ನಾಯಕ ಸಂಜು ಸ್ಯಾಮ್ಸನ್ ಆರ್ ಆರ್ ತಂಡವನ್ನು ತ್ಯಜಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಈ ಸಮಾಚಾರದ ಬಗ್ಗೆ ಇದೀಗ ಹೊಸ ಸಂಗತಿವೊಂದು ಹೊರಗೆ ಬಂದಿದೆ.
ಮುಂದಿನ ವರ್ಷದ ಐಪಿಎಲ್ ಸೀಸನ್ಗೂ ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ ನಾಯಕರಾಗಿ ಮುಂದುವರಿಯುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ವರದಿಗಳ ಪ್ರಕಾರ ಸಂಜು ರಾಜಸ್ಥಾನದ ಫ್ರಾಂಚೈಸಿಯೊಂದಿಗೆ 14 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡಿದ್ದಾರಂತೆ.
ಸ್ಟೀವ್ ಸ್ಮಿತ್ ದೆಹಲಿ ತಂಡವನ್ನು ಸೇರಿಕೊಳ್ಳುವುದರೊಂದಿಗೆ, ರಾಜಸ್ಥಾನವು ಐಪಿಎಲ್ 2021ರ ಋತುವಿಗಾಗಿ ಸಂಜು ಸ್ಯಾಮ್ಸನ್ಗೆ ನಾಯಕತ್ವವನ್ನು ಹಸ್ತಾಂತರಿಸಿತ್ತು. 2018 ರಲ್ಲಿ, ರಾಜಸ್ಥಾನವು 8 ಕೋಟಿ ರೂಪಾಯಿಗಳಿಗೆ ಸ್ಯಾಮ್ಸನ್ ಅವರನ್ನು ಖರೀದಿಸಿತ್ತು.
ಇದಲ್ಲದೇ ಆರ್ ಆರ್ ತಂಡ ರಿಟೈನ್ ಆಟಗಾರರ ಪಟ್ಟಿಯಲ್ಲಿ ಇಂಗ್ಲೆಂಡ್ ಸ್ಟಾರ್ ಬ್ಯಾಟ್ಸ್ಮನ್ ಜೋಸ್ ಬಟ್ಲರ್, ಜೋಫ್ರಾ ಆರ್ಚರ್, ಭಾರತದ ಯುವ ಕ್ರಿಕೆಟಿಗ ಜೈಸ್ವಾಲ್ ಮತ್ತು ಲಿಯಾಮ್ ಲಿವಿಂಗ್ಸ್ಟೋನ್ ಕೂಡ ಇದ್ದಾರೆ.
ಅದೇ ರೀತಿ ಸ್ಟಾರ್ ಆಲ್ ರೌಂಡರ್ ಬೆನ್ ಸ್ಟೋಕ್ಸ್ ಅವರನ್ನು ತಂಡ ಉಳಿಸಿಕೊಳ್ಳಲಿದೆಯೇ ಎಂಬ ಬಗ್ಗೆ ಮಾಹಿತಿ ಇಲ್ಲ.
ಇನ್ನು ಸಂಜು 14ನೇ ಆವೃತ್ತಿಯ ಐಪಿಎಲ್ ನಲ್ಲಿ 14 ಪಂದ್ಯಗಳಲ್ಲಿ 484 ರನ್ ಗಳಿಸಿದ್ದಾರೆ.