Sanju Samson : ಐಪಿಎಲ್ ನಲ್ಲಿ ದಾಖಲೆ ಬರೆದ ಸಂಜು
ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಐಪಿಎಲ್ 2022 ಅನ್ನು ಎಂದಿನಂತೆ ತಮ್ಮದೇ ಶೈಲಿಯಲ್ಲಿ ಪ್ರಾರಂಭಿಸಿದ್ದಾರೆ.
ಈ ಋತುವಿನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಮೊದಲ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅರ್ಧಶತಕ ಗಳಿಸಿದ್ರು.
ಜೈಶ್ವಾಲ್ ಔಟಾದ ಬಳಿಕ ಕ್ರೀಸ್ ಗೆ ಬಂದ ಸ್ಯಾಮ್ಸನ್ 27 ಎಸೆತಗಳಲ್ಲಿ 3 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ 55 ರನ್ ಗಳಿಸಿದರು. ಆ ಮೂಲಕ ಐಪಿಎಲ್ ನಲ್ಲಿ ಸಂಜು ಅಪರೂಪದ ಸಾಧನೆ ಮಾಡಿದರು.
ಸಂಜು ಸ್ಯಾಮ್ಸನ್ ತಂಡಕ್ಕಾಗಿ ಸತತ ಮೂರು ಋತುಗಳಲ್ಲಿ ಕನಿಷ್ಠ ಅರ್ಧಶತಕ ಗಳಿಸಿದ ಮೊದಲ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದಾರೆ.
ಇದರಲ್ಲಿ ಒಂದು ಶತಕ ಗಳಿಸಿರುವುದು ವಿಶೇಷ. 2020 ರಲ್ಲಿ CSK ವಿರುದ್ಧದ ಮೊದಲ ಪಂದ್ಯದಲ್ಲಿ, ಸಂಜು 32 ಎಸೆತಗಳಲ್ಲಿ 74 ರನ್ ಗಳಿಸಿದ್ದರು.
2021 ರ ಋತುವಿನಲ್ಲಿ, ಅವರು ಪಂಜಾಬ್ ಕಿಂಗ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ 63 ಎಸೆತಗಳಲ್ಲಿ 119 ರನ್ ಗಳಿಸಿದ್ದರು.
202ರ 15ನೇ ಆವೃತ್ತಿಯ ಐಪಿಎಲ್ ನಲ್ಲಿ SRH ವಿರುದ್ಧದ ಪಂದ್ಯದಲ್ಲಿ, ಸ್ಯಾಮ್ಸನ್ 27 ಎಸೆತಗಳಲ್ಲಿ 55 ರನ್ ಗಳಿಸಿದ್ದಾರೆ.