IPL 2022 | ಕೊಹ್ಲಿ ಕ್ಯಾಪ್ಟನ್ ಆಗಿದ್ರೆ RCB ಪ್ಲೇ ಆಫ್ ಗೆ ಹೋಗುತ್ತಿರಲಿಲ್ಲ..!!
ಇಂಡಿಯನ್ ಪ್ರಿಮಿಯರ್ ಲೀಗ್ 2022ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅದ್ಭುತ ಪ್ರದರ್ಶನ ನೀಡಿ ಪ್ಲೇ ಆಫ್ಸ್ ಪ್ರವೇಶಿಸಿದೆ.
ಈ ಹಿನ್ನೆಲೆಯಲ್ಲಿ ಆರ್ ಸಿಬಿ ತಂಡ ಕ್ಯಾಪ್ಟನ್ ಫಾಫ್ ಡುಪ್ಲಸಿಸ್, ಸಂಜಯ್ ಬಂಗಾರ್ ಅವರನ್ನ ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹಾಡಿ ಹೊಗಳಿದ್ದಾರೆ.
ಇದೇ ವೇಳೆ ಆರ್ ಸಿಬಿಯ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರನ್ನು ತೆಗೆಳಿದ್ದಾರೆ. ಬಂಗಾರ್ ಮತ್ತು ಫಾಫ್ ಅವರ ತಂತ್ರಗಳಿಂದಲೇ ಆರ್ ಸಿಬಿ ಪ್ಲೇ ಆಫ್ಸ್ ಪ್ರವೇಶಿಸಿದೆ ಎಂದು ಸೆಹ್ವಾಗ್ ಹೇಳಿದ್ದಾರೆ.
ಈ ಸೀಸನ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸ್ಥಿರ ಆಟದ ಮೂಲಕ ಎಲ್ಲರ ಗಮನ ಸೆಳೆದಿದೆ. ಒಂದು ವೇಳೆ ವಿರಾಟ್ ಕೊಹ್ಲಿ ಅವರಂತೆ ಸಂಜಯ್ ಮತ್ತು ಡುಪ್ಲೆಸಿಸ್ ಯೋಚಿಸಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.
ಕಳೆದ ಐಪಿಎಲ್ ಸೀಸನ್ ಮುಗಿದ ಬಳಿಕ ವಿರಾಟ್ ಕೊಹ್ಲಿ ನಾಯಕತ್ವದಿಂದ ಕೆಳಗಿಳಿದಿದ್ರು. ಹೀಗಾಗಿ ಮೆಗಾ ಹರಾಜಿನಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಫಾಫ್ ಡುಪ್ಲಸಿಸ್ ಅವರನ್ನ ಆರ್ ಸಿಬಿ ಫ್ರಾಂಚೈಸಿ ಖರೀದಿಸಿ, ಅವರಿಗೆ ನಾಯಕತ್ವ ನೀಡಿತ್ತು.
ಅದರಂತೆ ಫಾಫ್ ನಾಯಕತ್ವದಲ್ಲಿ ಆರ್ ಸಿಬಿ ಈ ಸೀಸನ್ ನಲ್ಲಿ ಹೊಸ ಜೋಷ್ ನಲ್ಲಿ ಕಾಣಿಸಿಕೊಂಡಿತು. ಆಡಿದ 14 ಪಂದ್ಯಗಳಲ್ಲಿ ಎಂಟು ಪಂದ್ಯಗಳಲ್ಲಿ ಗೆದ್ದು ಹದಿನಾರು ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದು, ಪ್ಲೇ ಆಫ್ಸ್ ಪಡೆದುಕೊಂಡಿದೆ.
ಇದರೊಂದಿಗೆ ಎಂಟನೇ ಬಾರಿ ಪ್ಲೇ ಆಫ್ಸ್ ಪ್ರವೇಸಿದೆ. ಹೀಗಾಗಿ ಈ ಬಾರಿಯಾದ್ರೂ ಆರ್ ಸಿಬಿ ಕಪ್ ಗೆಲ್ಲಲಿ ಎಂದು ಆರ್ ಸಿಬಿ ಅಭಿಮಾನಿಗಳು ಪ್ರಾರ್ಥಿಸುತ್ತಾರೆ.
ಈ ಹಿನ್ನೆಲೆಯಲ್ಲಿ ಐಪಿಎಲ್-2022ರಲ್ಲಿ ಆರ್‌ಸಿಬಿ ಪ್ರದರ್ಶನದ ಬಗ್ಗೆ ಸೆಹ್ವಾಗ್ ಆಸಕ್ತಿಕರ ಮಾತುಗಳನ್ನಾಡಿದ್ದಾರೆ. ಆರ್ ಸಿಬಿ ಪ್ಲೇ ಆಫ್ ಪ್ರವೇಶಿಸಿರುವ ಸಂಪೂರ್ಣ ಕ್ರೆಡಿಟ್ ಹೆಡ್ ಕೋಚ್ ಸಂಜಯ್ ಬಂಗಾರ್, ನಾಯಕ ಡುಪ್ಲೆಸಿಸ್ ಅವರಿಗೆ ಸಲ್ಲುತ್ತದೆ.
“ಮುಖ್ಯ ಕೋಚ್ ಆಗಿ ಸಂಜಯ್ ಬಂಗಾರ್ ಆಗಮನ… ಹೊಸ ನಾಯಕನ ಸೇರ್ಪಡೆ RCB ತಂತ್ರಗಳಲ್ಲಿ ಬದಲಾವಣೆ ತಂದಿದೆ.
ಈ ಹಿಂದೆ ವಿರಾಟ್ ಕೊಹ್ಲಿ ನಾಯಕರಾಗಿದ್ದಾಗ 2-3 ಪಂದ್ಯಗಳಲ್ಲಿ ಉತ್ತಮವಾಗಿ ಆಡದಿದ್ದರೆ ಆಟಗಾರನ ಬದಲಾವಣೆ ಮಾಡಲಾಗುತ್ತಿತ್ತು. ಆದರೆ ಬಂಗಾರ್ ಮತ್ತು ಡುಪ್ಲೆಸಿಸ್ ಆ ರೀತಿ ಮಾಡಲಿಲ್ಲ. ಪ್ಲೇಯಿಂಗ್ ಇಲೆವೆನ್ ನಲ್ಲಿ ಹೆಚ್ಚು ಬದಲಾವಣೆ ಮಾಡಲೇ ಇಲ್ಲ.
ಅನುಜ್ ರಾವತ್ ಹೊರತುಪಡಿಸಿದರೆ, ಬೇರೆ ಯಾವ ಆಟಗಾರನನ್ನೂ ಕೂಡ ಫಾಫ್ ಬದಲಿಸಲಿಲ್ಲ. ಇದು ಆಟಗಾರರು ಸ್ಥಿರ ಪ್ರದರ್ಶನ ನೀಡಲು ಸಹಾಯವಾಯ್ತು. ಇದೇ ಕಾರಣಕ್ಕೆ ಇದೀಗ ಆರ್ ಸಿಬಿ ಪ್ಲೇ ಆಫ್ಸ್ ಪ್ರವೇಶಿಸಿದೆ ಎಂದಿದ್ದಾರೆ ಸೆಹ್ವಾಗ್.