IPL 2022 : ನಾಲ್ಕು ದಾಖಲೆಗಳ ಮೇಲೆ ಗಬ್ಬರ್ ಕಣ್ಣು
ಐಪಿಎಲ್ 2022 ರ ದ್ವಿತೀಯಾರ್ಧದ ಭಾಗವಾಗಿ ಇಂದು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ತಂಡ ಸೆಣಸಾಡಲಿದೆ. ಈ ಪಂದ್ಯದಲ್ಲಿ ಶಿಖರ್ ಧವನ್ ನಾಲ್ಕು ದೊಡ್ಡ ದಾಖಲೆಗಳನ್ನು ನಿರ್ಮಿಸುವ ಸಾಧ್ಯತೆಗಳಿವೆ.
ಐಪಿಎಲ್ ವೃತ್ತಿ ಜೀವನದಲ್ಲಿ ಇದುವರೆಗೆ 199 ಪಂದ್ಯಗಳನ್ನು ಆಡಿರುವ ಗಬ್ಬರ್ ಇಂದಿನ ಪಂದ್ಯದೊಂದಿಗೆ 200 ಪಂದ್ಯಗಳ ಮೈಲುಗಲ್ಲು ತಲುಪಲಿದ್ದಾರೆ. ಧವನ್‌ಗಿಂತ ಮೊದಲು ಧೋನಿ (227), ದಿನೇಶ್ ಕಾರ್ತಿಕ್ (221), ರೋಹಿತ್ ಶರ್ಮಾ (220), ವಿರಾಟ್ ಕೊಹ್ಲಿ (215), ರವೀಂದ್ರ ಜಡೇಜಾ (207), ಸುರೇಶ್ ರೈನಾ (205) ಮತ್ತು ರಾಬಿನ್ ಉತ್ತಪ್ಪ (200) ಮಾತ್ರ ಈ ಸಾಧನೆ ಮಾಡಿದ್ದಾರೆ.
ಧವನ್ 199 ಪಂದ್ಯಗಳಲ್ಲಿ 34.67 ಸರಾಸರಿಯಲ್ಲಿ ಎರಡು ಶತಕ ಮತ್ತು 45 ಅರ್ಧ ಶತಕಗಳೊಂದಿಗೆ 5998 ರನ್ ಗಳಿಸಿದ್ದಾರೆ.
ಇಂದಿನ ಪಂದ್ಯದಲ್ಲಿ ಧವನ್ ಇನ್ನೂ 2 ರನ್ ಗಳಿಸಿದರೆ 6000 ರನ್ ಕ್ಲಬ್ ಸೇರಿದ ಎರಡನೇ ಐಪಿಎಲ್ ಕ್ರಿಕೆಟಿಗ ಎನಿಸಿಕೊಳ್ಳಲಿದ್ದಾರೆ. ಧವನ್‌ಗೂ ಮುನ್ನ ಕೊಹ್ಲಿ (6402) 6000 ರನ್‌ಗಳ ಗಡಿ ದಾಟಿದ ಏಕೈಕ ಬ್ಯಾಟ್ಸ್‌ಮನ್ ಆಗಿದ್ದರು.
ಸಿಎಸ್ ಕೆ ವಿರುದ್ಧ ಇದುವರೆಗೆ 27 ಪಂದ್ಯಗಳನ್ನಾಡಿರುವ ಧವನ್ 1 ಶತಕ ಹಾಗೂ 7 ಅರ್ಧ ಶತಕಗಳ ನೆರವಿನಿಂದ 941 ರನ್ ಗಳಿಸಿದ್ದಾರೆ. ಈ ಪಂದ್ಯದಲ್ಲಿ ಅವರು ಇನ್ನೂ 9 ರನ್ ಗಳಿಸಿದರೆ, ಸಿಎಸ್‌ಕೆ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ಕೊಹ್ಲಿ ಅವರ ದಾಖಲೆಯನ್ನು (28 ಪಂದ್ಯಗಳಲ್ಲಿ 949 ರನ್) ಹಿಂದಿಕ್ಕಲಿದ್ದಾರೆ.
ಈ ಪಂದ್ಯದಲ್ಲಿ ಧವನ್ ಇನ್ನೂ 59 ರನ್ ಗಳಿಸಿದರೆ, ಐಪಿಎಲ್ ಇತಿಹಾಸದಲ್ಲಿ ಒಂದೇ ತಂಡದ ವಿರುದ್ಧ 1000 ರನ್ ಗಳಿಸಿದ ಮೂರನೇ ಬ್ಯಾಟ್ಸ್‌ಮನ್ ಆಗಲಿದ್ದಾರೆ. ಧವನ್‌ಗಿಂತ ಮೊದಲು ರೋಹಿತ್ ಶರ್ಮಾ (ಕೆಕೆಆರ್ ವಿರುದ್ಧ 1018) ಮತ್ತು ಡೇವಿಡ್ ವಾರ್ನರ್ (ಪಂಜಾಬ್ ವಿರುದ್ಧ 1005) ಮಾತ್ರ ಈ ಸಾಧನೆ ಮಾಡಿದ್ದಾರೆ.
ಇಂದಿನ ಪಂದ್ಯದಲ್ಲಿ ಧವನ್ ಇನ್ನೂ 11 ರನ್ ಗಳಿಸಿದರೆ, ಚುಟುಕು ಕ್ರಿಕೆಟ್‌ನಲ್ಲಿ 9000 ರನ್ ಗಡಿ ತಲುಪಿದ ಮೂರನೇ ಭಾರತೀಯ ಬ್ಯಾಟ್ಸ್‌ಮನ್ ಆಗಲಿದ್ದಾರೆ. ಟಿ20ಯಲ್ಲಿ ಧವನ್‌ಗಿಂತ ಮೊದಲು ಕೊಹ್ಲಿ (10392 ರನ್) ಮತ್ತು ರೋಹಿತ್ ಶರ್ಮಾ (10009 ರನ್) 9000 ರನ್ ಗಡಿ ದಾಟಿದ್ದರು. ಧವನ್ ತಮ್ಮ ಟಿ20 ವೃತ್ತಿಜೀವನದಲ್ಲಿ ಇದುವರೆಗೆ 310 ಪಂದ್ಯಗಳನ್ನು ಆಡಿದ್ದಾರೆ ಮತ್ತು 8989 ರನ್ ಗಳಿಸಿದ್ದಾರೆ. ipl-2022-shikhar-dhawan-set-join-virat-kohli-mile-stone