IPL 2022 | ಚರಿತ್ರೆ ಸೃಷ್ಠಿಸಿದ ವಿರಾಟ್ ಕೊಹ್ಲಿ.. ಆ ಸಾಧನೆ ಮಾಡಿದ ಮೊದಲ ಬ್ಯಾಟರ್

1 min read
ipl-2022-virat-kohli-becomes-first-cricketer-score-over-6500-runs-ipl saaksha tv

ipl-2022-virat-kohli-becomes-first-cricketer-score-over-6500-runs-ipl saaksha tv

IPL 2022 | ಚರಿತ್ರೆ ಸೃಷ್ಠಿಸಿದ ವಿರಾಟ್ ಕೊಹ್ಲಿ.. ಆ ಸಾಧನೆ ಮಾಡಿದ ಮೊದಲ ಬ್ಯಾಟರ್

15ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಈವರೆಗೂ ಯಾವ ಬ್ಯಾಟರ್ ಮಾಡದಂತ ಸಾಧನೆ ಮಾಡಿದ್ದಾರೆ.

ಪಂಜಾಬ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮೊದಲ ಎಸೆತದಲ್ಲಿ ಸಿಂಗಲ್ ತೆಗೆದುಕೊಳ್ಳುವ ಮೂಲಕ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ 6500 ರನ್ ಗಳ ಮೈಲುಗಲ್ಲನ್ನು ತಲುಪಿದರು.

ಅಲ್ಲದೇ ಈ ಸಾಧನೆ ಮಾಡಿದ ಮೊದಲ ಬ್ಯಾಟರ್ ಎಂಬ ಸಾಧನೆ ಮಾಡಿದ್ದಾರೆ. ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ವಿರಾಟ್ ಕೊಹ್ಲಿ ಬಿಟ್ಟು ಮತ್ಯಾವ ಬ್ಯಾಟರ್ ಕೂಡ  ಈ ಸಾಧನೆ ಮಾಡಿಲ್ಲ.

ಈ ಋತುವಿನಲ್ಲಿ ಸಂಪೂರ್ಣ ವಿಫಲವಾಗಿರುವ (13 ಪಂದ್ಯಗಳಲ್ಲಿ 236 ರನ್) ಕೊಹ್ಲಿ ಮತ್ತೊಮ್ಮೆ ಪಂಜಾಬ್ ವಿರುದ್ಧದ ಪಂದ್ಯದಲ್ಲಿ 14 ಎಸೆತಗಳಲ್ಲಿ 2 ಬೌಂಡರಿ ಮತ್ತು 6 ಸಿಕ್ಸರ್‌ಗಳೊಂದಿಗೆ 20 ರನ್ ಗಳಿಸಿ ನಿರಾಸೆ ಮೂಡಿಸಿದರು.

ipl-2022-virat-kohli-becomes-first-cricketer-score-over-6500-runs-ipl saaksha tv
ipl-2022-virat-kohli-becomes-first-cricketer-score-over-6500-runs-ipl saaksha tv

ಕೊಹ್ಲಿ ತಮ್ಮ ಒಟ್ಟಾರೆ ಐಪಿಎಲ್ ವೃತ್ತಿಜೀವನದಲ್ಲಿ 220 ಪಂದ್ಯಗಳನ್ನು ಆಡಿದ್ದಾರೆ. 36.22 ಸರಾಸರಿಯಲ್ಲಿ 6519 ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕ ಮತ್ತು 43 ಅರ್ಧಶತಕಗಳು ಸೇರಿವೆ.

ವಿರಾಟ್ ಹೊರತು ಪಡಿಸಿ ಶಿಖರ್ ಧವನ್ (6186) ಕೊಹ್ಲಿ ನಂತರ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ, ಡೇವಿಡ್ ವಾರ್ನರ್ (5876), ರೋಹಿತ್ ಶರ್ಮಾ (5829) ಮತ್ತು ಸುರೇಶ್ ರೈನಾ (5528) ಕ್ರಮವಾಗಿ 3,4,5ನೇ ಸ್ಥಾನದಲ್ಲಿದ್ದಾರೆ.

ಮುಂಬೈನ ಬ್ರೆಬೋರ್ನ್ ಅಂಗಳದಲ್ಲಿ ನಡೆದ ಡು ಆರ್ ಡೈ ಪಂದ್ಯದಲ್ಲಿ ಪಂಜಾಬ್ ತಂಡ ಆರ್ ಸಿಬಿ ವಿರುದ್ಧ 54 ರನ್ ಗಳಿಂದ ಜಯ ಸಾಧಿಸಿ ಪ್ಲೇ ಆಫ್ಸ್ ಆಸೆಯನ್ನ ಜೀವಂತವಾಗಿರಿಸಿಕೊಂಡಿದೆ.

ಟಾಸ್ ಸೋತು ಮೊದಲ ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 209ರನ್ ಗಳಿಸಿತ್ತು.

ಪಂಜಾಬ್ ಪರ ಲಿಯಾಮ್ 70,ಜಾನಿ ಬೈರ್ ಸ್ಟೋ 66 ರನ್ ಗಳಿಸಿದ್ದರು. ಹರ್ಷಲ್ ಪಟೇಲ್ ನಾಲ್ಕು ವಿಕೆಟ್ ಪಡೆದರು.

210 ರನ್ ಗಳ ಬೃಹತ್ ಮೊತ್ತದ ಗುರಿಯನ್ನು ಬೆನ್ನಹತ್ತಿದ ಆರ್ ಸಿಬಿ 20 ಓವರ್ ಗಳಲ್ಲಿ 9 ವಿಕೆಟ್ ಗೆ ನಷ್ಟಕ್ಕೆ 155 ರನ್ ಗಳಿಸಿ ಸೋಲಿಗೆ ಶರಣಾಯಿತು.

ಈ ಸೋಲಿನೊಂದಿಗೆ ಆರ್ ಸಿಬಿ ತಂಡದ ಪ್ಲೇ ಆಫ್ಸ್ ಹಾದಿ ಮತ್ತಷ್ಟು ಕಠಿಣವಾಗಿದೆ. ipl-2022-virat-kohli-becomes-first-cricketer-score-over-6500-runs-ipl

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd