ಆರ್ ಆರ್ ತಂಡದ ವಿರುದ್ಧ ಭಾನುವಾರ ನಡೆದ ಪಂದ್ಯದಲ್ಲಿ ಆರ್ ಸಿಬಿ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹಂಗಾಮಿ ನಾಯಕನಾಗಿ ಕಣಕ್ಕೆ ಇಳಿದಿದ್ದರು. ಆದರೆ, ಗೆಲುವಿನ ಮಧ್ಯೆಯೂ ವಿರಾಟ್ ಕೊಹ್ಲಿಗೆ ಬರೊಬ್ಬರಿ 24 ಲಕ್ಷ ರೂ. ದಂಡ ವಿಧಿಸಲಾಗಿದೆ.
ಆ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರ್ಸಿಬಿ ನಿಗದಿತ ಅವಧಿಯಲ್ಲಿ ಬೌಲಿಂಗ್ ಸಂಪೂರ್ಣಗೊಳಿಸಲು ವಿಫಲವಾಗಿತ್ತು. ಹೀಗಾಗಿ ಆರ್ಸಿಬಿ ನಾಯಕನಿಗೆ ಐಪಿಎಲ್ ದಂಡ ವಿಧಿಸಿದೆ. ತಂಡವನ್ನು ಮುನ್ನಡೆಸಿದ ವಿರಾಟ್ ಕೊಹ್ಲಿಗೆ ಈ ಪಂದ್ಯದಲ್ಲಿ 24 ಲಕ್ಷ ರೂಪಾಯಿ ದಂಡವಿಧಿಸಲಾಗಿದ್ದು, ತಂಡದ ಇತರ ಆಟಗಾರರು ಕೂಡ ದಂಡದ ಶಿಕ್ಷೆಗೆ ಒಳಗಾಗಿದ್ದಾರೆ. ಅವರಿಗೆ ಕಡಿಮೆ ಪ್ರಮಾಣದ ದಂಡ ವಿಧಿಸಲಾಗಿದೆ.
ಈ ಬಗ್ಗೆ ಐಪಿಎಲ್ ಆಡಳಿತ ಮಂಡಳಿ ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದು, ವಿರಾಟ್ ಕೊಹ್ಲಿಗೆ ನಿಧಾನಗತಿಯ ಬೌಲಿಂಗ್ನ ಕಾರಣಕ್ಕಾಗಿ 24 ಲಕ್ಷ ರೂಪಾಯಿಯ ದಂಡ ವಿಧಿಸಲಾಗಿದೆ. ಈ ಐಪಿಎಲ್ನಲ್ಲಿ ಆರ್ಸಿಬಿ ತಂಡ ಎರಡನೇ ಬಾರಿಗೆ ಈ ತಪ್ಪು ಮಾಡಿದ್ದು, ನೀತಿ ಸಂಹಿತೆಯ ಆಧಾರದ ಮೇಲೆ ದಂಡ ವಿಧಿಸಲಾಗಿದೆ. ಇದರೊಂದಿಗೆ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡ ಎಲ್ಲ ಆಟಗಾರರು ಹಾಗೂ ಇಂಪಾಕ್ಟ್ ಸಬ್ ಸ್ಟಿಟ್ಯೂಟ್ ಗೆ ಕೂಡ 6 ಲಕ್ಷ ರೂ. ಅಥವಾ ಪಂದ್ಯದ ಸಂಭಾವನೆಯ ಶೇ. 25 ರಷ್ಟು ದಂಡವಾಗಿ ಪಾವತಿಸಬೇಕಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಈ ಪಂದ್ಯದಲ್ಲಿ ಆರ್ಸಿಬಿ ಒಂದು ಓವರ್ಗಳಷ್ಟು ನೊಧಾನವಾಗಿ ಬೌಲಿಂಗ್ ನಡೆಸಿತ್ತು.