IPL | ಅಫ್ಘಾನ್ ಯುವ ಬೌಲರ್ ಗೆ ಬಂಪರ್.. RCB ಪಾಳಯಕ್ಕೆ ಎಂಟ್ರಿ..
ಅಫ್ಘಾನಿಸ್ತಾನ ಅಂಡರ್-19 ತಂಡದ ಲೆಗ್ ಸ್ಪಿನ್ನರ್ ಇಜಾರುಲ್ ಹಕ್ ನವೀದ್ ಅವರಿಗೆ ಬಂಪರ್ ಆಫರ್ ಸಿಕ್ಕಿದೆ.
ಐಪಿಎಲ್-2022 ಸೀಸನ್ ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ನೆಟ್ ಬೌಲರ್ ಆಗಿ ನವೀದ್ ಆಯ್ಕೆಯಾಗಿದ್ದಾರೆ.
ನವೀದ್ ಈ ವರ್ಷದ ಅಂಡರ್-19 ವಿಶ್ವಕಪ್ ನಲ್ಲಿ ಅಫ್ಘಾನಿಸ್ತಾನ ತಂಡವನ್ನು ಪ್ರತಿನಿಧಿಸಿದ್ದರು.
ವಿಶ್ವಕಪ್‌ನಲ್ಲಿ ಆರು ಪಂದ್ಯಗಳನ್ನು ಆಡಿರುವ ನವೀದ್ ನಾಲ್ಕು ವಿಕೆಟ್ ಪಡೆದಿದ್ದಾರೆ.
ಈಗ ನವೀದ್ ನೆಟ್ಸ್ ನಲ್ಲಿ ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರಂತಹ ಸ್ಟಾರ್ ಆಟಗಾರರಿಗೆ ಬೌಲಿಂಗ್ ಮಾಡುತ್ತಾರೆ.
ಅಫ್ಘಾನಿಸ್ತಾನವನ್ನು ಪ್ರತಿನಿಧಿಸಿರುವ ಸ್ಪಿನ್ನರ್‌ಗಳು ಅಂತರಾಷ್ಟ್ರೀಯ ಕ್ರಿಕೆಟ್ ಹಾಗೂ ಐಪಿಎಲ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.
ರಶೀದ್ ಖಾನ್, ಮುಜೀಬ್-ಉರ್-ರೆಹಮಾನ್ ಮತ್ತು ಮೊಹಮ್ಮದ್ ನಬಿ ಆಫ್ಘನ್ ಕ್ರಿಕೆಟಿಗರು. IPL-2022 ಮಾರ್ಚ್ 26 ರಿಂದ ಪ್ರಾರಂಭವಾಗುತ್ತದೆ.
ಅದೇ ರೀತಿ ಫಾಫ್ ಡು ಪ್ಲೆಸಿಸ್ ಆರ್‌ಸಿಬಿ ತಂಡದ ನಾಯಕರನ್ನಾಗಿ ತಂಡವನ್ನ ಮುನ್ನಡೆಸಲಿದ್ದಾರೆ. RCB ತನ್ನ ಮೊದಲ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಅನ್ನು ಮಾರ್ಚ್ 27 ರಂದು ಎದುರಿಸಲಿದೆ.