ಸಿಎಸ್ ಕೆ ಬಳಗದಲ್ಲಿ ಇಬ್ಬರಿಗೆ ಕೋವಿಡ್ : ಆರ್ ಆರ್ -ಸಿಎಸ್ ಕೆ ಪಂದ್ಯ ಮುಂದೂಡಿಕೆ CSK
ನವದೆಹಲಿ : ಕೊರೊನಾ ಕಾಟದ ಮಧ್ಯೆ ಕ್ರೀಡಾಭಿಮಾನಿಗಳಿಗೆ ಒಂದಿಷ್ಟು ಖುಷಿ ನೀಡುತ್ತಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಮೇಲೆ ಕೊರೊನಾ ವಕ್ರದೃಷ್ಠಿ ಬಿದ್ದಿದೆ. ಐಪಿಎಲ್ ಮೇಲೆ ಕೋವಿಡ್ ಕರಾಳ ಛಾಯೆ ಮತ್ತಷ್ಟು ವಿಸ್ತಾರವಾಗಿದೆ.
ಚೆನ್ನೈ ಸೂಪರ್ ಕಿಂಗ್ಸ್ ಬಳಗದಲ್ಲಿ ಇಬ್ಬರಿಗೆ ಕೊರೊನಾ ದೃಢವಾಗಿದ್ದು, ಸಂಪೂರ್ಣ ತಂಡಕ್ಕೆ ಇದೀಗ ಆರು ದಿನಗಳ ಕಠಿಣ ಕ್ವಾರಂಟೈನ್ ವಿಧಿಸಲಾಗಿದೆ. ಹೀಗಾಗಿ ಬುಧವಾರ ನಡೆಯಬೇಕಿದ್ದ ಪಂದ್ಯವನ್ನ ಮುಂದೂಡಲಾಗಿದೆ.
ಬುಧವಾರ ರಾಜಸ್ಥಾನ್ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯಬೇಕಿತ್ತು.
ಆದ್ರೆ ಇಬ್ಬರಿಗೆ ಕೊರೊನಾ ದೃಢಪಟ್ಟ ಹಿನ್ನೆಲೆಯಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯವನ್ನು ಮುಂದೂಡಲಾಗಿದೆ.
ಸೋಮವಾರ ಕೋವಿಡ್ ಪಾಸಿಟಿವ್ ವರದಿಯಾದ ಬಳಿಕ ಚೆನ್ನೈ ತಂಡ ಯಾವುದೇ ಅಭ್ಯಾಸದಲ್ಲಿ ಭಾಗವಹಿಸಿಲ್ಲ.