ಪ್ರತಾಪ್ ಸಿಂಹ ಗಂಡೋ, ಹೆಣ್ಣೋ ಚೆಕ್ ಮಾಡ್ಬೇಕು : ಇಕ್ಬಾಲ್ ಅನ್ಸಾರಿ pratap-simha saaksha tv
ಕೊಪ್ಪಳ : ಪ್ರತಾಪ್ ಸಿಂಹ ಗಂಡೋ, ಹೆಣ್ಣೋ ಮೊದಲು ಚೆಕ್ ಮಾಡಬೇಕು ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕಿಡಿಕಾರಿದ್ದಾರೆ.
ಸಂಸದ ಪ್ರತಾಪ್ ಸಿಂಹ ಅವರ ಮರಿ ಖರ್ಗೆ ಗಂಡೋ ಹೆಣ್ಣೋ ಕ್ಲಾರಿಟಿ ಇಲ್ಲ ಎಂಬ ಹೇಳಿಕೆಗೆ ಕೊಪ್ಪಳದಲ್ಲಿ ಪ್ರತಿಕ್ರಿಯೆ ನೀಡಿ ಅನ್ಸಾರಿ, ಪ್ರತಾಪ್ ಸಿಂಹ ಎಂಪಿ ಆಗೋದಕ್ಕೆ ಲಾಯಕ್ಕಿಲ್ಲ.
ಪ್ರತಾಪ್ ಸಿಂಹ ಝೀರೋ ಟ್ಯಾಲೆಂಟ್. ಯಾವುದೋ ಗಾಳಿಯಲ್ಲಿ ಜನ ಆತನಿಗೆ ವೋಟ್ ಹಾಕಿದ್ದಾರೆ.
ಪ್ರತಾಪ್ ಸಿಂಹ ಕೂಡಲೇ ಕ್ಷಮೆ ಕೇಳಬೇಕು, ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಬಿಟ್ ಕಾಯಿನ್ ವಿಚಾರವಾಗಿ ಮಾತನಾಡಿದ ಅವರು, ಬಿಟ್ ಕಾಯಿನ್ ಹಗರಣದಲ್ಲಿ ಬಿಜೆಪಿ ಮುಖಂಡರೇ ಇದ್ದಾರೆ.
ರಾಜ್ಯದಿಂದ ಹಿಡಿದು ಅಂತರಾಷ್ಟ್ರೀಯ ಮಟ್ಟದ ದೊಡ್ಡ ಹಗರಣದಲ್ಲಿ ಬಿಜೆಪಿ ನಾಯಕರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.