ಮದುವೆಯಾಗದಕ್ಕೆ ನಿರ್ದೇಶಕನನ್ನ ತುಂಡು ತುಂಡಾಗಿ ಕತ್ತರಿಸಿ ಕೊಲೆ ಮಾಡಿದ ಪೋಷಕರು – ನನಗೆ ಪಶ್ಚಾತಾಪವಿಲ್ಲ ಎಂದ ತಂದೆ
ಲಂಡನ್ ಮೂಲದ ಇರಾನಿನ ನಿರ್ದೇಶಕ ಬಾಬಕ್ ಖೊರಮದ್ದೀನ್ ಅವರನ್ನು ತುಂಡು ತುಂಡಾಗಿ ಕತ್ತರಿಸಿ ಅತ್ಯಂತ ಬರ್ಬರವಾಗಿ ಕೊಲೆ ಮಾಡಲಾಗಿದೆ. ಕೊಲೆ ಮಾಡಿರುವುದು ಖುದ್ದು ಅವರ ಪೋಷಕರೇ ಎಂಬ ಆಘಾತಕಾರಿ ವಿಚಾರವೂ ಗೊತ್ತಾಗಿದೆ. ಪಶ್ಚಿಮ ಟೆಹ್ರಾನ್ ನ ಎಕ್ಬಟಾನ್ ನಲ್ಲಿ ಈ ಘಟನೆ ನಡೆದಿದ್ದು, ಕೊಲೆ ಮಾಡಿ ದೇಹದ ಭಾಗಗಳನ್ನು ಕಸದ ಚೀಲ ಮತ್ತು ಸೂಟ್ ಕೇಸ್ ನಲ್ಲಿ ತುಂಬಿ ಎಸೆಯಲಾಗಿದೆ.
ಕೇವಲ ಮದುವೆಯಾಗದ ವಿಚಾರಕ್ಕೆ ಬಾಬಕ್ ಅವರನ್ನು ಪೋಷಕರು ಬರ್ಬರವಾಗಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.. ಅವಿವಾಹಿತರಾಗಿದ್ದ ಬಾಬಕ್ ಅವರನ್ನು ಪೋಷಕರು ಮದುವೆ ಆಗುವಂತೆ ಒತ್ತಾಯ ಮಾಡಿದ್ದಾರೆ. ಆದರೆ ಮದುವೆ ಒಪ್ಪದಕ್ಕೆ ಬಾಬಕ್ ನನ್ನ ಪೋಷಕರೆ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೇ ಕೊಲೆ ಮಾಡಿರುವುದಾಗಿ ಪೋಷಕರು ಒಪ್ಪಿಕೊಂಡಿದ್ದಾರೆ.
ಇದೊಂದು ಮರ್ಯಾದಾ ಹತ್ಯೆ ಎಂದು ಪರಿಗಣಿಸಲಾಗಿದೆ. ಸಮಾಜದಲ್ಲಿ ತಮ್ಮ ಮರ್ಯಾದೆ, ಗೌರವ ಉಳಿಸಿಕೊಳ್ಳಲು ಕೊಲೆ ಮಾಡಿರುವುದಾಗಿ ಪೋಷಕರು ಹೇಳಿದ್ದಾರೆ. ಬಾಬಕ್ ಅವರ ತಂದೆ ವಿಚಾರಣೆ ವೇಳೆ ಮಗನನ್ನ ಕೊಂದ ಬಗ್ಗೆ ಸತ್ಯ ಬಾಯ್ಬಿಟ್ಟಿದ್ದಾರೆ. ಕೊಲೆ ಮಾಡುವ ಮೊದಲು ಮಾದಕ ವಸ್ತು ನೀಡಿ ಬಳಿಕ ಕೊಲೆ ಮಾಡಿ ಮಾಡಿ ತುಂಡು ತುಂಡಾಗಿ ಕತ್ತರಿಸಿರುವುದಾಗಿ ಹೇಳಿದ್ದಾರೆ.
ಸದ್ಯ ಪೊಲೀಸರು ಪೋಷಕರನ್ನು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಅಲ್ಲದೇ ಈ ಬಗ್ಗೆ ಮಾತನಾಡಿರುವ ಬಾಬಕ್ ತಂದೆ ಈ ಬಗ್ಗೆ ನನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ಹೇಳಿರುವ ವಿಡಿಯೋ ವೈರಲ್ ಆಗಿದೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.