ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukawamy Murder Case) ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್ ಜೈಲು ಪಾಲಾಗಿದ್ದಾರೆ. ಅವರ ಭೇಟಿಗೆ ತೆರಳಿದ್ದ ನಟ ವಿನೋದ್ ರಾಜ್ ಅವಕಾಶ ಸಿಗದೆ, ಮರಳಿ ಬಂದಿದ್ದಾರೆ. ಈ ಸಂದರ್ಭದಲ್ಲಿ ತುಂಬಾ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ವಿನೋದ್ ರಾಜ್ (Vinod Raj), ಜೈಲು ಅಧಿಕಾರಿಗಳು ದಿನಕ್ಕೆ ಒಬ್ಬರಿಗೆ ಮಾತ್ರ ಭೇಟಿ ಎಂದು ಹೇಳಿದರು. ಹೀಗಾಗಿ ಅವರ ಮನೆಯವರೊಂದಿಗೆ ಬಂದು ಭೇಟಿ ಮಾಡುತ್ತೇನೆ. ಕೆಲವು ನಡೆಯಬಾರದ ಘಟನೆಗಳು ನಡೆದು ಹೋಗುತ್ತವೆ. ವಿಧಿಗಿಂತಲೂ ಮೀರಿದ ಘಟನೆಗಳು ಆಗುತ್ತದೆ. ದರ್ಶನ್ ಗೆ ಮೂಗಿನ ತುದಿಯಲ್ಲಿ ಕೋಪ ಇದೆ. ಈಗ ದರ್ಶನ್ ಗೆ ಅಗ್ನಿ ಪರೀಕ್ಷೆ ಅಷ್ಟೇ. ನಮ್ಮ ತಾಯಿಗೆ ದರ್ಶನ್ ಮೇಲೆ ತುಂಬಾ ಪ್ರೀತಿ ಇಟ್ಟುಕೊಂಡಿದ್ದರು. ಅವರ ಹಾಸಿಗೆ ಹಿಡಿದಾಗಲೂ ದರ್ಶನ್ ಬಗ್ಗೆ ಮಾತನಾಡುತ್ತಿದ್ದರು. ತೂಗುದೀಪ್ ಮಗನನ್ನು ಬಿಟ್ಟು ಕೊಡಬೇಡ ಅಂತಿದ್ದರು. ಆದರೆ, ಯಾವುದೇ ಅಚಾತುರ್ಯದಿಂದ ಈ ಘಟನೆ ನಡೆದು ಹೋಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ದರ್ಶನ್ ತಂದೆ ತೂಗುದೀಪ್ ಸಾಕಷ್ಟು ಸಿನಿಮಾದಲ್ಲಿ ನಟಿಸಿದ್ದಾರೆ. ತಾಯಿಯ ಆರೋಗ್ಯ ಸರಿ ಇಲ್ಲದಾಗ ಬಂದು ನನ್ನ ತಾಯಿಯನ್ನು ದರ್ಶನ್ ಮಾತನಾಡಿಸಿದ್ದರು. ಕಳೆದ ಬಾರಿ ನನಗೆ ಸರ್ಜರಿಗೆ ಮುನ್ನ ನಾನು ಮತ್ತು ದರ್ಶನ್ ಭೇಟಿಯಾಗಿದ್ದೆವು ಎಂದು ಹೇಳಿದ್ದಾರೆ.








