ಬೆಂಗಳೂರು: ಪಂಚ ಗ್ಯಾರಂಟಿಗಳಿಂದಲೇ ಅಧಿಕಾರಕ್ಕೆ ಏರಿ, ಈಗ ಕಾಂಗ್ರೆಸ್ ಸರ್ಕಾರ ತೊಂದರೆ ಅನುಭವಿಸುತ್ತಿರುವಂತೆ ಕಾಣುತ್ತಿದೆ. ಇವುಗಳಿಂದಾಗಿ ಸರ್ಕಾರಕ್ಕೆ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು ಪಾರಾಗಲು ಸಿದ್ದರಾಮಯ್ಯ (Siddaramaiah) ಸರ್ಕಾರ ಆಸ್ತಿ ಮಾರಲು ಮುಂದಾಗಿದೆಯೇ ಎನ್ನಲಾಗುತ್ತಿದೆ.
ಇತ್ತೀಚೆಗಷ್ಟೇ ತೈಲ ದರ ಹೆಚ್ಚಿಸಿದ್ದ ರಾಜ್ಯ ಸರ್ಕಾರ ಇದೀಗ ಬೆಂಗಳೂರು ಸುತ್ತಲಿನ 25 ಸಾವಿರ ಎಕರೆ ಸರ್ಕಾರಿ ಜಮೀನನ್ನು ವರಮಾನ ಸಂಗ್ರಹಕ್ಕೆ ಬಳಸಿಕೊಳ್ಳಲು ಮುಂದಾಗಿದೆ ಎನ್ನಲಾಗುತ್ತಿದೆ.
ಆದರೆ, ಇದಕ್ಕೆ ಡಿಸಿಎಂ ಸಮರ್ಥನೆ ನೀಡುತ್ತಿದ್ದು, ಆದರೆ ನಾವು ಆಸ್ತಿಗಳನ್ನು ಅಡ ಇಡುತ್ತಿಲ್ಲ. ನಮ್ಮ ಆಸ್ತಿಗಳನ್ನು ರಕ್ಷಣೆ ಮಾಡಲು ಈ ಕ್ರಮ ಕೈಗೊಂಡಿದ್ದೇವೆ ಎದು ಹೇಳುತ್ತಿದ್ದಾರೆ. ಇದು ಸಾಲದೆಂಬಂತೆ ಸದ್ಯದಲ್ಲೇ ಬೆಂಗಳೂರಲ್ಲಿ ನೀರಿನ ದರ ಹೆಚ್ಚಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಇದರಿಂದಾಗಿ ವಿಪಕ್ಷಗಳು ಸರ್ಕಾರದ ವಿರುದ್ಧ ಮುಗಿ ಬೀಳುತ್ತಿವೆ.