ಲಂಡನ್ : ಕೆಲವರು ಕಂಡ ಕಂಡಲ್ಲಿ ಉಗುಳಿದರೆ, ಇನ್ನೂ ಕೆಲವರಿಗೆ ಅದು ಅಸಹ್ಯ. ಆದರೆ, ಇಲ್ಲೊಬ್ಬ ಮಹಿಳೆ ಉಗುಳಿನಿಂದಲೇ ಮಾರಾಟ (Spit Selling) ಮಾಡಿ ತಿಂಗಳಿಗೆ ಬರೋಬ್ಬರಿ 40 ಲಕ್ಷ ರೂ. ಸಂಪಾದಿಸುತ್ತಿದ್ದಾಳೆ. ನಂಬಲು ಅಸಾಧ್ಯವಾದರೂ ಇದು ಸತ್ಯ.
ವೈದ್ಯೆ ಆಗಬೇಕೆಂದುಕೊಂಡಿದ್ದ UKನ ಮ್ಯಾಂಚೆಸ್ಟರ್‌ನ ನಿವಾಸಿ ಲತೀಶಾ ಜೋನ್ಸ್ (Latiesha Jones) ಗೆ ಒಂದು ದಿನ ಯಾರೊ ಒಬ್ಬರು ನಿನ್ನ ಎಂಜಲು ಕಳುಹಿಸು ಎಂದು ಕೇಳಿದ್ದಾರೆ. ಇದನ್ನು ಜೋಕ್ ಎಂದು ತಿಳಿದ ಈಕೆ ಅದಕ್ಕೆ 30 ಸಾವಿರ ಡಿಮ್ಯಾಂಡ್ ಮಾಡಿದ್ದಾಳೆ. ಆದರೆ, ಆ ವ್ಯಕ್ತಿ ಕೂಡಲೇ ಅದನ್ನು ಪಾವತಿಸಿದ್ದಾನೆ. ಅಂದಿನಿಂದ ಇಲ್ಲಿಯವರೆಗೂ ಆಕೆ ಎಂಜಲು ಮಾರುತ್ತಲೇ ತನ್ನ ಬದುಕು ಕಟ್ಟಿಕೊಂಡಿದ್ದಾಳೆ.
ಮೊದಲು ಲತೀಶಾ ಆರ್ಥಿಕವಾಗಿ ಸಾಕಷ್ಟು ತೊಂದರೆಯಲ್ಲಿದ್ದಳು. ಪಾರ್ಟ್ ಟೈಮ್ ಜಾಮ್ ಮಾಡುತ್ತಿದ್ದಳು. ಮೈತುಂಬ ಸಾಲವಿತ್ತು. ಆದರೆ, ಸದ್ಯ ಅವುಗಳನ್ನೆಲ್ಲ ತೀರಿಸಿ, ಕೆಲಸವನ್ನೂ ಕೈ ಬಿಟ್ಟು, ಎಂಜಲಿನಿಂದಲೇ ಕೈ ತುಂಬಾ ಸಂಪಾದನೆ ಮಾಡುತ್ತ, ಮನೆ ಕೂಡ ಖರೀದಿಸಿ, ಆರಾಮಾಗಿ ಜೀವನ ಸಾಗಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ ಸದ್ಯ ಲತೀಶಾ, ತನ್ನ ವಾರದ ಬೆವರು ಒರೆಸಿದ ಬಟ್ಟೆ, ಹಳೆಯ ಟೂತ್ ಬ್ರಷ್, ತೆಗೆದ ಉಗುರುಗಳನ್ನು ಕೂಡ ಮಾರಾಟ ಮಾಡುತ್ತಿದ್ದಾಳೆ ಎನ್ನಲಾಗಿದೆ.