ಐಎಸ್ಎಲ್: ಬೆಂಗಳೂರು ಎಫ್ ಸಿ ಗೆ ಜಯ Bengaluru FC Saaksha tv
ಸಂಘಟಿತ ಆಟದ ಪ್ರದರ್ಶನ ನೀಡಿದ ಬೆಂಗಳೂರು ಫುಟ್ಬಾಲ್ ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್ಎಲ್) ಫುಟ್ಬಾಲ್ ಟೂರ್ನಿಯ ಎಂಟನೇ ಆವೃತ್ತಿಯಲ್ಲಿ ಗೆಲುವಿನ ಆರಂಭವನ್ನು ಮಾಡಿದೆ.
ಶನಿವಾರ ಗೋವಾದಲ್ಲಿ ನಡೆದ ಪಂದ್ಯದಲ್ಲಿ ಬಿಎಫ್ ಸಿ 4-2 ರಿಂದ ನಾರ್ತ್ ಈಸ್ಟ್ ಯೂನೈಟೆಡ್ ಎಫ್ ಸಿ ವಿರುದ್ಧ ಭರ್ಜರಿ ಜಯ ಸಾಧಿಸಿದೆ.
ಕ್ಲಿಟನ್ ಸಿಲ್ವಾ (14ನೇ ನಿಮಿಷ), ಮಶೂರ್ ಶೆರೀಫ್ (22ನೇ ನಿಮಿಷ ), ಜಯೇಶ್ ರಾಣೆ (42ನೇ ನಿಮಿಷ), ಪ್ರಿನ್ಸ್ ಇಬಾರಾ (81ನೇ ನಿಮಿಷ) ಗೋಲು ಬಾರಿಸಿ ಜಯದಲ್ಲಿ ಮಿಂಚಿದರು.
ನಾರ್ತ್ ಈಸ್ಟ್ ಪರ ಬ್ರೌನ್ ಸೀನಿಯರ್ (17ನೇ ನಿಮಿಷ), ಮಥಿಯಾಸ್ ಕೊರಿಯರ್ (25ನೇ ನಿಮಿಷ) ಗೋಲು ಬಾರಿಸಿ ಸೋಲಿನಲ್ಲಿ ಮಿಂಚಿದರು.
ಆರಂಭದಲ್ಲಿ ಬಿಎಫ್ ಸಿ ತಂಡ ಆಕ್ರಮಣಕಾರಿ ಆಟಕ್ಕೆ ಮಣೆ ಹಾಕಿತು. ಪರಿಣಾಮ 14ನೇ ನಿಮಿಷದಲ್ಲಿ ಮೊದಲ ಗೋಲಿನ ನಗೆ ಬೀರಿತು.
ಈ ಗೋಲು ದಾಖಲಾದ ಮೂರನೇ ನಿಮಿಷದಲ್ಲಿ ನಾರ್ತ್ ಈಸ್ಟ್ ಸಹ ಬಿಎಫ್ ಸಿ ಗೋಲ್ ಕೀಪರ್ ವಂಚಿಸುವಲ್ಲಿ ಸಫಲವಾಯಿತು.
ಪರಿಣಾಮ ಪಂದ್ಯ 1-1 ರಿಂದ ಸಮಾನಾಂತರವಾಗಿ ಸಾಗುತ್ತಿತ್ತು.
ಈ ಅವಧಿಯಲ್ಲಿ ನಾರ್ತ್ ಈಸ್ಟ್ ತಂಡದ ಮಶೂರ್ ಶೆರೀಫ್ ಬೆಂಗಳೂರು ತಂಡಕ್ಕೆ ಉಡುಗೊರೆ ಗೋಲು ನೀಡಿದರು. ಬಳಿಕ 25ನೇ ನಿಮಿಷದಲ್ಲಿ ನಾರ್ತ್ ಈಸ್ಟ್ ತಂಡ ಗೋಲು ಸಿಡಿಸಿತು.
ಮೊದಲಾವಧಿ ಮುಕ್ತಾಯಕ್ಕೆ ಮೂರು ನಿಮಿಷದ ಮೊದಲು ಬೆಂಗಳೂರು ತಂಡದ ಪರ ಜಯೇಶ್ ರಾಣೆ ಸೊಗಸಾದ ಗೋಲು ಬಾರಿಸಿ ಮಿಂಚಿದರು. ಬಿಎಫ್ ಸಿ ಈ ಅವಧಿಯಲ್ಲಿ 3-2 ರಿಂದ ಮುನ್ನಡೆ ಸಾಧಿಸಿತು.
ಎರಡನೇ ಅವಧಿಯಲ್ಲಿ ಬೆಂಗಳೂರು ತಂಡ 81ನೇ ನಿಮಿಷದಲ್ಲಿ ಗೋಲು ಸಿಡಿಸಿ ಗೆಲುವಿನ ಅಂತರವನ್ನು ಹೆಚ್ಚಿಸಿದರು.