ಮಂಗಳೂರು: ಹಿಂದೂ ಧಾರ್ಮಿಕ ಕಟ್ಟೆಯ ಮೇಲೆ ಇಸ್ಲಾಂ ಧ್ವಜ ನೆಡಲಾಗಿದ್ದು, ತೆರವುಗೊಳಿಸಲಾಗಿದೆ.
ಜಿಲ್ಲೆಯ ಮೂಡುಬಿದಿರೆ(Muḍubidire) ತಾಲೂಕಿನ ಪುಚ್ಚೆಮುಗೇರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಿಷಯ ತಿಳಿಯುತ್ತಿದಂತೆ ಸ್ಥಳಕ್ಕೆ ಆಗಮಿಸಿದ ಮೂಡಬಿದಿರೆ ಪೊಲೀಸರು ಧ್ವಜವನ್ನು ತೆರವು ಮಾಡಿದ್ದಾರೆ. ಈ ಕುರಿತು ಪೊಲೀಸರ ಗಮನಕ್ಕೆ ತರದಿರುವುದಕ್ಕೆ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಳ್ಳಲಾಗಿದೆ.
ಪಿಡಿಒ ಕರ್ತವ್ಯದ ಕುರಿತು ಚ್ಚರಿಕೆ ನೀಡಿದ್ದು, ಮುಂದೆ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದ್ದಾರೆ. ಗ್ರಾಮದಲ್ಲಿ ಅಹಿತಕರ ಘಟನೆಗೆ ಈ ಧ್ವಜ ಕಾರಣವಾಗುತ್ತಿತ್ತು. ಪೊಲೀಸರ ಸಕಾಲಿಕ ಕ್ರಮದಿಂದ ಪ್ರಕರಣ ತಿಳಿಯಾಗಿದೆ ಎನ್ನಲಾಗಿದೆ. ಸದ್ಯ ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.