ಕೊರೊನಾ ಸಂಕಷ್ಟ : ಭಾರತದ ನೆರವಿಗೆ ನಿಂತ ಇಸ್ರೇಲ್ – ವೈದ್ಯಕೀಯ ಉಪಕರಣಗಳ ಪೂರೈಕೆ
ನವದೆಹಲಿ: ಭಾರತದಲ್ಲಿ ಕೋವಿಡ್ 2ನೇ ಅಲಿಯ ಪರಿಸ್ಥಿತಿ ಹಿಂದೆಂದಿಗಿಂತಲೂ ಅತಿ ಭಯಾನಕವಾಗಿದೆ. ಆಕ್ಸಿಜನ್ ಕೊರತೆ , ಬೆಡ್ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿರುವ ಭಾರತಕ್ಕೆ ಅನೇಕ ರಾಷ್ಟ್ರಗಳು ಸಹಾಯಾಸ್ತ ಚಾಚಿವೆ. ಇದೀಗ ಭಾರತಕ್ಕೆ ಇಸ್ರೇಲ್ ಹಾಗೂ ಬ್ರಿಟನ್ ರಾಷ್ಟ್ರಗಳು ವೈದ್ಯಕೀಯ ಉಪಕರಣಗಳನ್ನು ಪೂರೈಸುವುದಾಗಿ ಹೇಳಿವೆ.
ಇಸ್ರೇಲ್ ವಾರ ಪೂರ್ತಿ ಭಾರತಕ್ಕೆ ವೈದ್ಯಕೀಯ ಸಲಕರಣೆಗಳನ್ನು ಕಳುಹಿಸುವುದಾಗಿ ತಿಳಿಸಿದೆ. ಆಕ್ಸಿಜನ್ ಜನರೇಟರ್ ಗಳು, ಉಸಿರಾಟ ಸಾಧನಗಳು ಸೇರಿದಂತೆ ಮತ್ತಿತರ ವೈದ್ಯಕೀಯ ಸಲಕರಣೆಗಳನ್ನು ಇಂದಿನಿಂದ ವಾರಪೂರ್ತಿ ಕಳುಹಿಸುವುದಾಗಿ ಇಸ್ರೇಲ್ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ. ಭಾರತ ಇಸ್ರೇಲ್ ನ ಅತ್ಯಪ್ತ ರಾಷ್ಟ್ರವಾಗಿದ್ದು, ಇಂತಹ ಸಂಕಷ್ಟದ ಸಂದರ್ಭದಲ್ಲಿ ಭಾರತದೊಂದಿಗೆ ನಿಲುತ್ತೇವೆ. ನಮ್ಮ ಭಾರತೀಯ ಸಹೋದರರು, ಸಹೋದರಿಯರಿಗೆ ಜೀವ ರಕ್ಷಕ ಸಲಕರಣೆಗಳನ್ನು ಪೂರೈಸುತ್ತಿರುವುದಾಗಿ ಇಸ್ರೇಲ್ ವಿದೇಶಾಂಗ ಸಚಿವ ಗಾಬಿ ಗಬಿ ಅಶ್ಕೆನಾಜಿ ತಿಳಿಸಿದ್ದಾರೆ.