ಗಾಜಾ: ಇಸ್ರೇಲ್ (Israel) ವೈಮಾನಿಕ ದಾಳಿಯಲ್ಲಿ ಗಾಜಾ (Gaza)ದ ಹತ್ತಿರ ಇರುವ ನಿರಾಶ್ರಿತರ ಶಿಬಿರದಲ್ಲಿ ಅಪಾರ್ಟ್‌ಮೆಂಟ್ ಕಟ್ಟಡ ನೆಲಸಮವಾಗಿವೆ. ಹಿರಿಯ ಹಮಾಸ್ (hamas) ಸೇನಾ ನಾಯಕನನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯು ಉಗ್ರಗಾಮಿ ಕಮಾಂಡ್ ಸೆಂಟರ್ ಮತ್ತು ಭೂಗತ ಸುರಂಗ ಜಾಲ ನಾಶಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ಇದು 7 ಜನ ಒತ್ತೆಯಾಳುಗಳ ಸಾವಿಗೆ ಕಾರಣವಾಗುತ್ತಿದೆ ಎನ್ನಲಾಗುತ್ತಿದೆ. ಹಮಾಸ್ ಅ.7 ರಂದು ಸುಮಾರು 240 ಜನರನ್ನು ಒತ್ತೆಯಾಳಾಗಿರಿಸಿಕೊಂಡಿತ್ತು. ಭಯೋತ್ಪಾದಕರು ಇಸ್ರೇಲ್ ನಗರಗಳಿಗೆ ನುಗ್ಗಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 1400 ಜನರನ್ನು ಕೊಲೆ ಮಾಡಿದ್ದರು. ಈ ಗುಂಪು ಇಬ್ಬರು ಅಮೆರಿಕನ್ ನಾಗರಿಕರು ಸೇರಿದಂತೆ ನಾಲ್ಕು ನಾಗರಿಕರನ್ನು ಬಿಡುಗಡೆ ಮಾಡಿದೆ.
ಉತ್ತರ ಗಾಜಾದ ಪ್ರಮುಖ ಹಮಾಸ್ ಕಮಾಂಡರ್ ಸೇರಿದಂತೆ ಹತ್ತಾರು ಉಗ್ರರು ಹತರಾಗಿದ್ದಾರೆ ಎಂದು ಇಸ್ರೇಲಿ ಮಿಲಿಟರಿ ತಿಳಿಸಿದೆ.








