ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ಇಸ್ರೋದಿಂದ ಉಚಿತ ವೃತ್ತಿಪರ ಕೋರ್ಸ್ ತರಬೇತಿ.
ಪ್ರಿಯ ವಿದ್ಯಾರ್ಥಿಗಳೆ…..ನೀವು ಬಾಹ್ಯಾಕಾಶ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಕಟ್ಟಿಕೊಳ್ಳಲು ಬಯಸುತ್ತಿದ್ದೀರಾ.. ? ಹಾಗಾದ್ರೆ ನಿಮಗೊಂದು ಸುವರ್ಣವಕಾಶ ಇಲ್ಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ((Indian Space Research Organisation ) ಅಥವಾ ಇಸ್ರೋದ ಉಚಿತ ಆನ್ಲೈನ್ ಕೋರ್ಸ್ಗಳನ್ನ ಆರಂಭಿಸುತ್ತಿದ್ದು ವಿದ್ಯಾರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ.
ಡೆಹ್ರಾಡೂನ್ನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ರಿಮೋಟ್ ಸೆನ್ಸಿಂಗ್ (ಐಐಆರ್ಎಸ್) ಶಿಕ್ಷಣ ಸಂಸ್ಥೆಯ ಆಯೊಜನೆಯ ಅಡಿಯಲ್ಲಿ ಇಸ್ರೋ ಸಂಸ್ಥೆಯು 3 ವೃತ್ತಿ ಪರ ಕೋರ್ಸ್ ಗಳನ್ನ ಈ ವರ್ಷದಿಂದ ಶುರು ಮಾಡುತ್ತಿದೆ.
ಇಸ್ರೋ ಸಂಸ್ಥೆಯ ಅಧಿಕೃತ ವೆಬ್ಸೈಟ್ https://www.iirs.gov.in/ ಗೆ ಭೇಟಿ ನೀಡುವ ಮೂಲಕ ಕೋರ್ಸ್ಗಳಿಗೆ ನೋಂದಾಯಿಸಿಕೊಳ್ಳಬಹುದಾಗಿದೆ. ಯಾವುದೇ ಶುಲ್ಕವನ್ನು ಪಾವತಿಸದೆ, ಯಾರು ಬೇಕಾದರೂ ಕೋರ್ಸ್ಗೆ ನೊಂದಾಯಿಸಕೊಳ್ಳಬಹುದು. ಎಲ್ಲಾ ಮೂರು ಕೋರ್ಸ್ಗಳು ಸಂಪೂರ್ಣವಾಗಿ ಉಚಿತವಾಗಿದ್ದು, ಕೋರ್ಸ್ ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರವನ್ನು ನೀಡಲಾಗುತ್ತದೆ.