ಮಾನವ ಸಹಿತ ಗಗನಯಾನಕ್ಕೆ ಕ್ರಯೋಜೆನಿಕ್ ಎಂಜಿನ್ ಯಶಸ್ವಿ ಪರೀಕ್ಷೆ…
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಗಗನಯಾನ ಕಾರ್ಯಕ್ರಮಕ್ಕಾಗಿ ಕ್ರಯೋಜೆನಿಕ್ ಎಂಜಿನಿನ್ನ ಅರ್ಹತಾ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ. ತಮಿಳುನಾಡಿನ ಮಹೇಂದ್ರಗಿರಿಯ ISRO ಪ್ರೊಪಲ್ಷನ್ ಕಾಂಪ್ಲೆಕ್ಸ್ (IPRC) ನಲ್ಲಿ 720 ಸೆಕೆಂಡುಗಳ ಕಾಲ ಕ್ರಯೋಜೆನಿಕ್ ಎಂಜಿನಿನ್ನ ಟೆಸ್ಟ್ ನಡೆಸಲಾಗಿದೆ.
ಎಂಜಿನ್ನ ಕಾರ್ಯಕ್ಷಮತೆಯು ಪರೀಕ್ಷಾ ಉದ್ದೇಶಗಳನ್ನು ಪೂರೈಸಿದೆ ಎಂದು ಇಸ್ರೋ ಟ್ವೀಟ್ ಮಾಡಿ ತಿಳಿಸಿದೆ. ಪರೀಕ್ಷೆಯಲ್ಲಿ ಸಕಾರಾತ್ಮಕ ಪಲಿತಾಂಶ ಸಿಕ್ಕಿದೆ ಎಂದು ಇಸ್ರೋ ಪ್ರಧಾನ ಕಛೇರಿ ಮಾಹಿತಿ ನೀಡಿದೆ.
Today, ISRO successfully conducted the qualification test of Cryogenic Engine for the Gaganyaan programme for a duration of 720 seconds at ISRO Propulsion Complex (IPRC), Mahendragiri, Tamil Nadu. Details: https://t.co/6hGrC6keBA pic.twitter.com/qB20tPsu3r
— ISRO (@isro) January 12, 2022
“ಈ ಯಶಸ್ವಿ ದೀರ್ಘಾವಧಿಯ ಪರೀಕ್ಷೆಯು ಮಾನವ ಸಹಿತ ಬಾಹ್ಯಾಕಾಶ ಕಾರ್ಯಕ್ರಮ ಗಗನಯಾನದಲ್ಲಿ ಪ್ರಮುಖ ಮೈಲಿಗಲ್ಲು. ಇದು ಮಾನವ ಸಹಿತ ಉಡಾವಣಾ ವಾಹನಕ್ಕೆ ಇಂಡಕ್ಷನ್ಗಾಗಿ ಕ್ರಯೋಜೆನಿಕ್ ಎಂಜಿನ್ನ ವಿಶ್ವಾಸಾರ್ಹತೆ ಮತ್ತು ದೃಢತೆಯನ್ನು ಖಚಿತಪಡಿಸುತ್ತದೆ. ಎಂದು ತಿಳಿಸಿದೆ.
ಈ ಎಂಜಿನ್ ಇನ್ನೂ 1810 ಸೆಕೆಂಡುಗಳ ಕಾಲ ನಾಲ್ಕು ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ. ಕ್ರಯೋಜೆನಿಕ್ ಎಂಜಿನ್ ಅರ್ಹತೆಯನ್ನು ಪೂರ್ಣಗೊಳಿಸಲು ಇನ್ನೂ ಎರಡು ಅಲ್ಪಾವಧಿಯ ಪರೀಕ್ಷೆಗಳು ಮತ್ತು ಒಂದು ದೀರ್ಘಾವಧಿಯ ಪರೀಕ್ಷೆಗೆ ಒಳಗಾಗುತ್ತದೆ ಎಂದು ಇಸ್ರೋ ಹೇಳಿದೆ.