ಮಾಡಿದ ಒಳ್ಳೆಯ ಅಥವಾ ಕೆಟ್ಟ ಕರ್ಮಗಳನ್ನು ಖಂಡಿತ ಅನುಭವಿಸಲೇಬೇಕು. ಎಷ್ಟೇ ಕಾಲ ಕಳೆದರೂ ಅನುಭವಿಸದೆ ಕರ್ಮ ಕಳೆಯುವುದಿಲ್ಲ..
ಶನಿಕಾಟ, ಸಾಡೇಸಾತಿ, ಅಷ್ಟಮ ಪಂಚಮ ಶನಿ ಪೀಡೆಗಳಿಗೆ ಪರಿಹಾರವಾಗಿ ಶಾಸ್ತ್ರಗಳು ಅನೇಕ ಉಪಾಯಗಳನ್ನು ಹೇಳಿವೆ, ಕೆಲವು ಶೀಘ್ರಫಲಪ್ರದ ಉಪಾಯಗಳನ್ನು ಇಲ್ಲಿ ಕೊಡಲಾಗಿದೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
(೧) ಶನಿ ಪ್ರತಿಮಾ ದಾನ – ಇದು ವಿಶೇಷ ಉಪಾಯವಾಗಿದ್ದು ಇದರ ಹೆಚ್ಚಿನ ಮಾಹಿತಿಗಳನ್ನು ಪಂಡಿತರಿಂದ ತಿಳಿದುಕೊಳ್ಳಬೇಕು.
(೨) ದಾನಗಳು –
ಪ್ರತಿ ಶನಿವಾರ ಶನೈಶ್ಚರ ಪ್ರೀತ್ಯರ್ಥ ಉಪವಾಸ ಮಾಡಬೇಕು. ಆಂಜನೇಯ ಮತ್ತು ಶನೈಶ್ಚರರ ದರ್ಶನವನ್ನು ಪ್ರಾತಃ ಕಾಲದಲ್ಲಿ ಮಾಡಬೇಕು. ಈ ಕೆಳಗೆ ಹೇಳಿರುವ ದಾನದ ವಸ್ತುಗಳಲ್ಲಿ ಎಲ್ಲವನ್ನು ಅಥವಾ ಶಕ್ಯವಾದದನ್ನು ಶಕ್ಯವಿದ್ದಷ್ಟು ಶನಿವಾರದಂದು ದಾನಮಾಡಬೇಕು.
ದಾನದ ವಸ್ತುಗಳು – ಕಬ್ಬಿಣದ ಪಾತ್ರೆ, ಎಳ್ಳಿನ ಎಣ್ಣೆ, ಕಪ್ಪು ಬಟ್ಟೆ, ನೀಲಮಣಿ, ಉದ್ದು, ಎಳ್ಳು, ನೀಲಿ ಬಣ್ಣದ ಹೂವುಗಳು, ದೀಪದಾನ ಇವುಗಳನ್ನು ದಕ್ಷಿಣಾಸಹಿತ ಯೋಗ್ಯ ವಿಪ್ರನಿಗೆ ದಾನ ಮಾಡಬೇಕು, ಈ ದಾನಗಳು ಹೆಚ್ಚೆಚ್ಚು ಮಾಡಿದಷ್ಟು ಫಲಪ್ರದ. ಧಾನ್ಯಗಳನ್ನು ಪಾತ್ರಸಹಿತ ದಾನಮಾಡಬೇಕು.
(೩) ಅಶ್ವತ್ಥ ವೃಕ್ಷ ಪ್ರದಕ್ಷಿಣಾ-ನಮಸ್ಕಾರ
ಪ್ರತಿದಿನ ಅಥವಾ ಕನಿಷ್ಟ ಪಕ್ಷ ಶನಿವಾರದಂದು ಪ್ರಾತಃ ಕಾಲದಲ್ಲಿ ಅಶ್ವತ್ಥವೃಕ್ಷದ ಪ್ರದಕ್ಷಿಣಾ ನಮಸ್ಕಾರಗಳನ್ನು ಮಾಡಬೇಕು. ಇದು ಅತೀಫಲಪ್ರದವಾದ ಉಪಾಯ.
(೪) ಶಮೀ ವೃಕ್ಷದ ಪ್ರದಕ್ಷಿಣಾ ನಮಸ್ಕಾರ
ಶಮೀವೃಕ್ಷವು ಶನಿದೇವನ ವೃಕ್ಷವಾಗಿದೆ, ಮೇಲೆ ಹೇಳಿರುವಂತೆ ನಿತ್ಯ ಶಮೀವೃಕ್ಷದ ಪ್ರದಕ್ಷಿಣಾ ನಮಸ್ಕಾರಾದಿಗಳಿಂದ ಶನಿಬಾಧೆ ನಿವಾರಣೆಯಾಗುತ್ತದೆ.
(೫) ಜಪ – ಶನೈಶ್ಚರನ ಜಪಸಂಖ್ಯೆಯು 2300. ಈ ಮಂತ್ರಗಳನ್ನು ಸ್ವತಃ ಅಥವಾ ಬ್ರಾಹ್ಮಣ, ಪುರೋಹಿತರಿಂದ ಮಾಡಿಸಿ ಶನಿಶಾಂತಿಯನ್ನು ಮಾಡಿಸಬೇಕು.
(೬) ಸ್ತೋತ್ರ – ಪಾರಾಯಣ
– ವಿಷ್ಣುಸಹಸ್ರನಾಮ ದಿವ್ಯ ಸ್ತೋತ್ರವಾಗಿದ್ದು ಸಮಸ್ತ ಗ್ರಹದೋಷ ಪರಿಹಾರಕವಾಗಿದೆ, ನಿತ್ಯ ಪಾರಾಯಣದಿಂದ ಸರ್ವಸಿದ್ಧಿಯಾಗುತ್ತದೆ.
– ಶನೈಶ್ಚರವಿರಚಿತ ಶ್ರೀಲಕ್ಷ್ಮೀನರಸಿಂಹ ದೇವರ ಸ್ತೋತ್ರ
– ಆಂಜನೇಯ ಸ್ತೋತ್ರ.
– ಶಿವಮಹಿಮ್ನ ಸ್ತೋತ್ರ.
– ಪಿಪ್ಪಲಾದ ಕೃತಂ ಶ್ರೀಶನಿ ಸ್ತೋತ್ರಮ್ (ಸ್ಕಂದ ಪುರಾಣೋಕ್ತ)
– ಶ್ರೀಬ್ರಹ್ಮಾಂಡಪುರಾಣೋಕ್ತಂ ಶ್ರೀಶನಿಕವಚಮ್ (ಶ್ರೀಶನಿವಜ್ರಪಂಜರ ಸ್ತೋತ್ರಮ್)
– ಶ್ರೀಶನೈಶ್ಚರಸ್ತೋತ್ರಮ್ (ದಶರಥಕೃತ)
ಈ ಸ್ತೋತ್ರಗಳನ್ನು ಪ್ರತಿನಿತ್ಯ ಪ್ರಾತಃಕಾಲದಲ್ಲಿ ಶುಚಿರ್ಭೂತರಾಗಿ ಶ್ರೀಶನಿದೇವರ ಸನ್ನಿಧಿಯಲ್ಲಿ, ಆಂಜನೇಯನ ಸನ್ನಿಧಿಯಲ್ಲಿ, ಅಶ್ವತ್ಥ-ಶಮೀ ವೃಕ್ಷಗಳ ಸನ್ನಿಧಿಯಲ್ಲಿ ಪಾರಾಯಣಮಾಡುವುದು ಅತ್ಯಂತ ಶ್ರೇಯಸ್ಕರ. ಅನುಕೂಲವಿಲ್ಲದವರು ನಿತ್ಯ ಮನೆಯಲ್ಲಿ ಮತ್ತು ಶನಿವಾರ ಮತ್ತು ರವಿವಾರಗಳಂದು ಈ ಸ್ತೋತ್ರಗಳನ್ನು ದೇವಸ್ಥಾನಗಳಲ್ಲಿ ಪಾರಾಯಣ ಮಾಡಬಹುದು.
(೬) ದೇವತಾ ಸೇವೆ – ಉಪವಾಸ
ಪ್ರತಿ ಶನಿವಾರದಂದು
– ಶ್ರೀವೆಂಕಟರಮಣದೇವರ ದರ್ಶನ ಸೇವೆ.
ಲೇಖನ:
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ 8548998564
ಧಾರ್ಮಿಕಚಿಂತಕರು,ಜೋತಿಷ್ಯರು ,ಸಲಹೆಗಾರರು,
ಸಂಶೋಧಕರು. ಹಾಗು ಬರಹಗಾರರು✍
– ಹನುಮಂತದೇವರ ಭಕ್ತರಿಗೆ ಶನಿದೇವ ಅಭಯಪ್ರದನಾಗಿದ್ದಾನೆ. ಶನಿವಾರದಂದು ಹನುಮಂತನ ದೇವಸ್ಥಾನದಲ್ಲಿ ತೈಲಸಮರ್ಪಣೆ ಮಾಡಬೇಕು.
ಪ್ರತಿ ಶನಿವಾರ ಸಂಪೂರ್ಣ ಉಪವಾಸ ಅಥವಾ ಒಪ್ಪತ್ತು ಉಪವಾಸವನ್ನು ಶನಿದೇವರ ಪ್ರೀತ್ಯರ್ಥ ಮಾಡಬೇಕು.