ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ (BS Yediyurappa) ಅವರಿಗೆ ವಾರಂಟ್ ಜಾರಿಯಾಗಿದ್ದು, ಅವರು ಬೇಗ ಬಂದರೆ ಉತ್ತಮ ಎಂದು ಗೃಹ ಸಚಿವ ಜಿ. ಪರಮೇಶ್ವರ್ (G Parameshwar) ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಮೇಶ್ವರ್ ಬೇಗ ಬಂದರೆ ಒಳ್ಳೆಯದು. ಇಲ್ಲವಾದರೆ ಕರೆದುಕೊಂಡು ಬರುತ್ತಾರೆ. ಕಾನೂನು ಪ್ರಕಾರವೇ ಕ್ರಮ ತೆಗೆದುಕೊಳ್ಳುತ್ತಾರೆ. ಯಡಿಯೂರಪ್ಪ ದೆಹಲಿಯಲ್ಲಿ ಇದ್ದಾರೆ ಎನ್ನುತ್ತಿದ್ದಾರೆ. ಸೋಮವಾರ ಬರುವುದಾಗಿ ಹೇಳಿದ್ದಾರೆ. ಇಲ್ಲವಾದರೆ ಅಲ್ಲಿಗೆ ಅಧಿಕಾರಿಗಳು ಹೋಗುತ್ತಾರೆ ಎಂದು ಹೇಳಿದ್ದಾರೆ.
ಬಿಜೆಪಿ ಸುಮ್ಮನೆ ಸೇಡಿನ ರಾಜಕಾರಣ ಎಂದು ಕಥೆ ಕಟ್ಟುತ್ತಿದೆ. ಇದರಲ್ಲಿ ರಾಹುಲ್ ಯಾಕೆ ಭಾಗಿಯಾಗ್ತಾರೆ? ಎಂದು ಪ್ರಶ್ನಿಸಿದ್ದಾರೆ.