ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತೀಯ ಆಲ್ ರೌಂಡರ್ ರವೀಂದ್ರ ಜಡೇಜಾ ಶ್ರೀಲಂಕಾದ ದಿಗ್ಗಜ ಆಟಗಾರ ಸನತ್ ಜಯಸೂರ್ಯ ದಾಖಲೆ ಮುರಿದು ಅಪರೂಪದ ದಾಖಲೆ ಮಾಡಿದ್ದಾರೆ.
ಮೊದಲ ಟೆಸ್ಟ್ ಪಂದ್ಯದಲ್ಲಿ ಅಜೇಯ ಅರ್ಧಶತಕ ಸಿಡಿಸಿರುವ ರವೀಂದ್ರ ಜಡೇಜಾ ಭಾರತದ ತಂಡದ ರನ್ ವೇಗದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಈಗಾಗಲೇ ಜಡೇಜಾ ಅಜೇಯ 81 ರನ್ ಕಲೆಹಾಕಿದ್ದಾರೆ. ಅಲ್ಲದೇ, ಈ ಪಂದ್ಯದಲ್ಲಿ ಜಡೇಜಾ ಎರಡು ಭರ್ಜರಿ ಸಿಕ್ಸರ್ ಸಿಡಿಸಿರುವ ಜಡೇಜಾ, ಟೆಸ್ಟ್ ನಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಸನತ್ ಜಯಸೂರ್ಯ ಅವರ ದಾಖಲೆ ಮುರಿದಿದ್ದಾರೆ.
69 ಟೆಸ್ಟ್ ಪಂದ್ಯವಾಡಿರುವ ಜಡೇಜಾ 60 ಸಿಕ್ಸರ್ ಸಿಡಿಸಿದ್ದು, 110 ಟೆಸ್ಟ್ ಪಂದ್ಯಗಳಲ್ಲಿ 59 ಸಿಕ್ಸರ್ ಬಾರಿಸಿದ್ದ ಸನತ್ ಜಯಸೂರ್ಯ ದಾಖಲೆ ಮುರಿದಿದ್ದಾರೆ.
ಈ ಪಟ್ಟಿಯಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಬೆನ್ ಸ್ಟೋಕ್ಸ್ 127 ಸಿಕ್ಸರ್ ಬಾರಿಸಿ ಮೊದಲ ಸ್ಥಾನದಲ್ಲಿದ್ದಾರೆ. ಭಾರತದ ವೀರೇಂದ್ರ ಸೆಹ್ವಾಗ್ ಎರಡನೇ ಸ್ಥಾನದಲ್ಲಿದ್ದಾರೆ. ಭಾರತದ ಪರ 104 ಟೆಸ್ಟ್‌ಗಳಲ್ಲಿ 91 ಸಿಕ್ಸರ್ ಗಳನ್ನು ಸಿಡಿಸಿ ವೀರೇಂದ್ರ ಸೆಹ್ವಾಗ್ ಅಗ್ರಸ್ಥಾನದಲ್ಲಿದ್ದಾರೆ. ಮಾಜಿ ನಾಯಕ ಎಂ.ಎಸ್. ಧೋನಿ 90 ಟೆಸ್ಟ್‌ಗಳಲ್ಲಿ 78 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. ಮೂರನೇ ಸ್ಥಾನದಲ್ಲಿ ರೋಹಿತ್ ಶರ್ಮಾ 55 ಟೆಸ್ಟ್ ಪಂದ್ಯಗಳಲ್ಲಿ 77 ಸಿಕ್ಸರ್ ಸಿಡಿಸಿದ್ದಾರೆ.
ಸಚಿನ್ ತೆಂಡೂಲ್ಕರ್ 200 ಟೆಸ್ಟ್ ಪಂದ್ಯಗಳಲ್ಲಿ 69, 131 ಟೆಸ್ಟ್ ಪಂದ್ಯಗಳನ್ನು ಆಡಿರುವ ಮಾಜಿ ನಾಯಕ ಕಪಿಲ್ ದೇವ್ 61 ಸಿಕ್ಸರ್ ಐದನೇ ಸ್ಥಾನದಲ್ಲಿದ್ದಾರೆ. 60 ಸಿಕ್ಸರ್ ಜಡೇಜಾ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದಾರೆ.