ಇಂಗ್ಲೆಂಡ್ ತಂಡದ ವಿರುದ್ಧ 434 ರನ್ಗಳಿಂದ ಗೆದ್ದಿರುವ ಭಾರತದ ಪರ ರವೀಂದ್ರ ಜಡೇಜಾ ಮೊದಲ ಇನ್ನಿಂಗ್ಸ್ನಲ್ಲಿ ಅದ್ಭುತ ಶತಕ ಸಿಡಿಸಿದಲ್ಲದೆ, ಎರಡನೇ ಇನ್ನಿಂಗ್ಸ್ನಲ್ಲಿ ಅದ್ಭುತ ಬೌಲಿಂಗ್ ಮಾಡಿ 5 ವಿಕೆಟ್ ಪಡೆದು ಮಿಂಚಿದ್ದಾರೆ. ಈ ಮೂಲಕ ಎರಡೆರಡು ಬಾರಿ ಇತಿಹಾಸ ಬರೆದಿದ್ದಾರೆ.
ಈ ಪಂದ್ಯದ ಮೂಲಕ ಆಂಗ್ಲರ ವಿರುದ್ಧ ಎರಡನೇ ಬಾರಿಗೆ 5 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಬಂದ ಒಲಿ ಪೋಪ್ (3) ರೂಪದಲ್ಲಿ ಜಡೇಜಾ ಮೊದಲ ವಿಕೆಟ್ ಪಡೆದರು. ಇದಾದ ನಂತರ ಜಡೇಜಾ ಜೋ ರೂಟ್ (7), ಜಾನಿ ಬೈರ್ಸ್ಟೋವ್ (4) ಮತ್ತು ಬೆನ್ ಫಾಕ್ಸ್ (16) ರೂಪದಲ್ಲಿ ಪ್ರಮುಖ ಬ್ಯಾಟ್ಸ್ಮನ್ ಗಳನ್ನು ಔಟ್ ಮಾಡಿದರು. ಮಾರ್ಕ್ ವುಡ್ (33) ಅವರನ್ನು ಔಟ್ ಮಾಡುವ ಮೂಲಕ ಜಡೇಜಾ ಇಂಗ್ಲೆಂಡ್ ಇನ್ನಿಂಗ್ಸ್ಗೆ ಅಂತ್ಯ ಹಾಡಿದರು. ಜಡೇಜಾ ಮೊದಲ ಇನ್ನಿಂಗ್ಸ್ ನಲ್ಲಿ ಕೂಡ 2 ವಿಕೆಟ್ ಪಡೆದಿದ್ದರು.
ಈ ಆಲ್ರೌಂಡರ್ ಪ್ರದರ್ಶನಕ್ಕೆ ರವೀಂದ್ರ ಜಡೇಜಾ ಪಂದ್ಯದ ಆಟಗಾರ ಪ್ರಶಸ್ತಿಗೂ ಭಾಜನರಾದರು. ಬ್ಯಾಟಿಂಗ್ ನಲ್ಲಿಯೂ ಕಮಾಲ್ ಮಾಡಿದ್ದ ಜಡೇಜಾ, 9 ಬೌಂಡರಿ ಹಾಗೂ 2 ಸಿಕ್ಸರ್ಗಳ ಸಹಿತ 112 ರನ್ ಕಲೆಹಾಕಿ. ನಾಯಕ ರೋಹಿತ್ ಶರ್ಮಾ ಜೊತೆಗೆ ದ್ವಿಶತಕದ ಜೊತೆಯಾಟವನ್ನು ಹಂಚಿಕೊಂಡಿದ್ದರು.
70 ಟೆಸ್ಟ್ ಪಂದ್ಯಗಳನ್ನಾಡಿರುವ ಜಡೇಜಾ 132 ಇನ್ನಿಂಗ್ಸ್ಗಳಲ್ಲಿ 24ಕ್ಕೂ ಹೆಚ್ಚು ಸರಾಸರಿಯಲ್ಲಿ 287 ವಿಕೆಟ್ಗಳನ್ನು ಪಡೆದಿದ್ದಾರೆ. 13 ಬಾರಿ 5 ವಿಕೆಟ್ ಮತ್ತು ಎರಡು ಬಾರಿ 10 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ.