ನೆಟ್ ಫ್ಲಿಕ್ಸ್ ನಲ್ಲಿ ‘ಜಗಮೇ ಥಾಂದಿರಮ್’ – ಬೇಸರ ಹೊರ ಹಾಕಿದ ನಾಯಕ ಧನುಷ್…!
ಕಾಲಿವುಡ್ ನ ಖ್ಯಾತ ನಟ ಧನುಷ್ ನಟನೆಯ ಬಬಹುನಿರೀಕ್ಷೆಯ ಸಿನಿಮಾ ‘ಜಗಮೇ ಥಾಂದಿರಮ್’ ಟ್ರೇಲರ್ ಮೂಲಕ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿದೆ. ಸಿನಿಮಾ ರಿಲೀಸ್ ಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ನಡುವೆ ಕೋವಿಡ್ ನಿಂದಾಗಿ ಸಿನಿಮಾವನ್ನ ಥಿಯೇಟರ್ ಬದಲಾಗಿದೆ OTTಯಲ್ಲಿ ರಿಲೀಸ್ ಮಾಡಲಾಗ್ತಿದೆ.. ನೆಟ್ಫ್ಲಿಕ್ಸ್ನಲ್ಲಿ ಜೂನ್ 18ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ. ಆದರೆ ಸಿನಿಮಾ ಮೇಕರ್ ಗಳ ಈ ನಿರ್ಧಾರದಿಂದಾಗಿ ಖುದ್ದು ಸಿನಿಮಾದ ನಾಯಕ ಧನುಷ್ ಬೇಸರಗೊಂಡಿದ್ದಾರೆ.. ಮತ್ತೊಂದೆಡೆ ಧನುಷ್ ಅಭಿಮಾನಿಗಳು ಸಹ ನಿರಾಸೆಗೊಂಡಿದ್ದಾರೆ.
ಟ್ರೇಲರ್ ಅನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಧನುಷ್, ‘ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದಿದ್ದರೆ ಅದ್ಭುತ ಅನುಭವ ನೀಡುತ್ತಿತ್ತು ಈ ಸಿನಿಮಾ. ಆದರೆ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆ ಆಗುತ್ತಿದೆ. ಅಲ್ಲಿಯೂ ನಿಮ್ಮನ್ನೆಲ್ಲ ರಂಜಿಸುತ್ತದೆ ಎಂದುಕೊಂಡಿದ್ದೇನೆ’ ಎಂದಿದ್ದಾರೆ.
‘ಕರ್ಣನ್’ ಬಿಡುಗಡೆ ಬಳಿಕ ‘ಜಗಮೇ ಥಾಂದಿರಮ್’ ಸಿನಿಮಾವನ್ನು ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡುವ ಪ್ಲಾನ್ ನಲ್ಲಿ ಸಿನಿಮಾತಂಡವಿತ್ತು. ಆದ್ರೆ ಲಾಕ್ಡೌನ್ ಆದ ಕಾರಣ ಸಿನಿಮಾದ ನಿರ್ಮಾಪಕರು ನೆಟ್ಫ್ಲಿಕ್ಸ್ನಲ್ಲಿ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಿದ್ದು, ಧನುಷ್ ಗೆ ಈ ನಿರ್ಧಾರ ಬೇಸರ ಮೂಡಿಸಿದೆ.