ಬಾಲಕೃಷ್ಣ ನಟನೆಯ ‘ವೀರ ಸಿಂಹ ರೆಡ್ಡಿ’ ಚಿತ್ರದ ‘ಜೈ ಬಾಲಯ್ಯ ಮಾಸ್ ಸಾಂಗ್ ಬಿಡುಗಡೆ…
ನಟಸಿಂಹ ನಂದಮುರಿ ಬಾಲಕೃಷ್ಣ ಅಭಿನಯದ ಮಾಸ್ ಆಕ್ಷನ್ ಸಿನಿಮಾ ‘ವೀರ ಸಿಂಹ ರೆಡ್ಡಿ’ ಚಿತ್ರದ ಮೊದಲ ಸಾಂಗ್ ಇಂದು ಬಿಡುಗಡೆಯಾಗಿದೆ. ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ನಡಿ ಗೋಪಿಚಂದ್ ಮಲಿನೇನಿ ನಿರ್ದೇಶಿಸಿರುವ ಸಿನಿಮಾವಿದು. ಚಿತ್ರದಲ್ಲಿ ಹಿಂದೆಂದೂ ಕಾಣದ ಹೊಸ ಅವತಾರದಲ್ಲಿ ಮಾಸ್ ಮಹರಾಜ ನಂದಮುರಿ ಬಾಲಕೃಷ್ಣ ಕಾಣಿಸಿಕೊಂಡಿದ್ದಾರೆ. ಬಾಲಯ್ಯ ಅಭಿಮಾನಿಗಳು ಈ ಸಿನಿಮಾ ಬಿಡುಗಡೆಯನ್ನೇ ಎದುರು ನೋಡುತ್ತಿದ್ದಾರೆ. ಬಾಲಯ್ಯ ಮಾಸ್ ಅಭಿಮಾನಿಗಳ ಮನತಣಿಸಲು ಚಿತ್ರತಂಡ ‘ಜೈ ಬಾಲಯ್ಯ’ ಮಾಸ್ ಸಾಂಗ್ ಇಂದು ಬಿಡುಗಡೆ ಮಾಡಿದೆ.
ಹೈದ್ರಾಬಾದ್ ನಲ್ಲಿ ಕೊನೆಯ ಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಸಿನಿಮಾ ತಂಡ ಚಿತ್ರದ ಪ್ರಚಾರ ಕಾರ್ಯವನ್ನು ಆರಂಭಿಸಿದೆ. ಹಾಡಿನ ಮೂಲಕ ಸಿನಿರಸಿಕರ ಮನಗೆಲ್ಲಲು ಹೊರಟಿದೆ. ಚಿತ್ರದ ಮಾಸ್ ನಂಬರ್ ಸಾಂಗ್ ‘ಜೈ ಬಾಲಯ್ಯ’ ಹಾಡಿನ ಲಿರಿಕಲ್ ವೀಡಿಯೋ ಸಾಂಗ್ ಬಿಡುಗಡೆ ಮಾಡಿದೆ. ರಾಮ್ ಜೋಗಯ್ಯ ಶಾಸ್ತ್ರಿ ಸಾಹಿತ್ಯಕ್ಕೆ ಕರಿಮುಲ್ಲ ದನಿಯಾಗಿದ್ದು, ತಮನ್ ಎಸ್ ಮಾಸ್ ಮ್ಯೂಸಿಕ್ ಕಿಕ್ ನೀಡಿದೆ. ಬಾಲಯ್ಯ ಅಭಿಮಾನಿಗಳು ಹಾಡು ಕೇಳಿ ಥ್ರಿಲ್ ಆಗಿದ್ದು, ಬಿಡುಗಡೆಯಾದ ಒಂದೇ ಗಂಟೆಯಲ್ಲಿ ಆರು ಲಕ್ಷಕ್ಕೂ ಅಧಿಕ ವೀವ್ಸ್ ಪಡೆದಕೊಂಡಿದೆ.
2023ರ ಸಂಕ್ರಾಂತಿ ಹಬ್ಬಕ್ಕೆ ‘ವೀರ ಸಿಂಹ ರೆಡ್ಡಿ’ ಸಿನಿಮಾ ಗ್ರ್ಯಾಂಡ್ ಆಗಿ ತೆರೆ ಕಾಣುತ್ತಿದೆ. ಚಿತ್ರದಲ್ಲಿ ಶೃತಿ ಹಾಸನ್ ನಾಯಕಿಯಾಗಿ ನಟಿಸಿದ್ದು, ಸ್ಯಾಂಡಲ್ ವುಡ್ ಬ್ಲ್ಯಾಕ್ ಕೋಬ್ರಾ ದುನಿಯಾ ವಿಜಯ್, ವರಲಕ್ಷ್ಮೀ ಶರತ್ ಕುಮಾರ್ ಚಿತ್ರದ ಮುಖ್ಯ ತಾರಾಗಣದಲ್ಲಿದ್ದಾರೆ.
ಮೈತ್ರಿ ಮೂವಿ ಮೇಕರ್ಸ್ ಅದ್ದೂರಿ ಬ್ಯಾನರ್ ನಡಿ ಚಿತ್ರವನ್ನು ನವೀನ್ ಯಾರ್ನೇನಿ ಹಾಗೂ ವೈ.ರವಿ ಶಂಕರ್ ನಿರ್ಮಾಣ ಮಾಡಿದ್ದಾರೆ. ಸಾಯಿ ಮದೇವ್ ಸಂಭಾಷಣೆ, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನವಿನ್ ನೂಲಿ ಸಂಕಲನ, ರಿಶಿ ಪುಂಜಾಬಿ ಕ್ಯಾಮೆರಾ ವರ್ಕ್, ರಾಮ್- ಲಕ್ಷ್ಮಣ್ ಹಾಗೂ ವೆಂಕಟ್ ಸಾಹಸ ನಿರ್ದೇಶನ ಚಿತ್ರಕ್ಕಿದೆ.
jai balayya: Balakrishna starrer ‘Veera Simha Reddy’ movie ‘Jai Balayya’ mass song release…