ಬಹುಭಾಷೆಗಳಲ್ಲಿ ನಟಿಸಿ ಇಡೀ ದೇಶದ ಸಿನಿ ರಸಿಕರ ಮನ ಗೆದ್ದಿದ್ದ ಹಿರಿಯ ನಟಿ ಜಯಪ್ರದಾ (Jayaprada) ಅವರಿಗೆ ಚೆನ್ನೈನ (Chennai) ಎಗ್ಮೋರ್ ನ್ಯಾಯಾಲಯ 6 ತಿಂಗಳ ಜೈಲು ಶಿಕ್ಷೆ ಪ್ರಕಟಿಸಿದೆ.
ಜಯಪ್ರದಾ ಅವರ ವಿರುದ್ಧ ಸರ್ಕಾರದ ಲೇಬರ್ ಇನ್ಶುರೆನ್ಸ್ ಕಾರ್ಪೋರೇಷನ್ ದೂರು ದಾಖಲಿಸಿತ್ತು. ಈ ಪ್ರಕರಣದಲ್ಲಿಯೇ ಕೋರ್ಟ್ ಜಯಪ್ರದಾ ಅವರಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ.
ಜಯಪ್ರದಾ ಅವರ ಹೆಸರಿನಲ್ಲಿ ಚೆನ್ನೈನಲ್ಲಿ ಎರಡು ಚಿತ್ರಮಂದಿರಗಳಿವೆ. ಈ ಎರಡು ಚಿತ್ರ ಮಂದಿರಗಳಲ್ಲಿ ಅನೇಕ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಕಾರ್ಮಿಕರ ಇ.ಎಸ್.ಐ ಹಣವನ್ನು ಕಡಿತ ಮಾಡಿಕೊಂಡು ಕಾರ್ಮಿಕ ಇಲಾಖೆಗೆ ಅದನ್ನು ಪಾವತಿಸಿಲ್ಲ ಎಂದು ಲೇಬರ್ ಇನ್ಶರೆನ್ಸ್ ದೂರು ದಾಖಲಿಸಿತ್ತು. ಚಿತ್ರಮಂದಿರಗಳ ಮೇಲೆ ಕೂಡ ಕೇಸ್ ದಾಖಲಾಗಿದೆ. ಆಸ್ತಿ ತೆರಿಗೆಯನ್ನು ಕಟ್ಟದೇ ಇರುವ ಕಾರಣಕ್ಕಾಗಿ ಜಪ್ತಿ ಕೂಡ ಮಾಡಲಾಗಿದೆ.






