ವಿಶಾಖಪಟ್ಟಣಂ: ಇಂಗ್ಲೆಂಡ್ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆರಂಭಿಕ ಹಾಗೂ ಯುವ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಆಕರ್ಷಕ ದ್ವಿಶತಕ ಬಾರಿಸಿದ್ದಾರೆ.
ಜೈಸ್ವಾಲ್ ಇಂಗ್ಲೆಂಡ್ 277 ಎಸೆತಗಳಲ್ಲಿ 200 ರನ್ (18 ಬೌಂಡರಿ, 7 ಸಿಕ್ಸರ್) ಸಿಡಿಸಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕಿರಿಯ ವಯಸ್ಸಿಗೆ ಈ ಸಾಧನೆ ಮಾಡಿದ ಭಾರತದ (Team India) 3ನೇ ಆಟಗಾರ ಎನಿಸಿಕೊಂಡಿದ್ದಾರೆ.
ಎರಡನೇ ದಿನದಾಟ ಆರಂಭಿಸಿದ ಜೈಸ್ವಾಲ್ 209 ರನ್ ಗಳಿಸಿ ಔಟಾದರು. ಮೊದಲ ದಿನದಾಟದಲ್ಲಿ 179 ರನ್ ಗಳಿಸಿದ್ದ ಜೈಸ್ವಾಲ್ 2ನೇ ದಿನದಾಟದಲ್ಲಿ 290 ಎಸೆತಗಳಲ್ಲಿ 209 ರನ್ ಬಾರಿಸಿದರು. ರಣಜಿ, ದುಲೀಪ್, ಇರಾನಿ ಟೂರ್ನಿಗಳಲ್ಲಿ ದ್ವಿಶತಕ ಸಾಧಿಸಿದ್ದ 22 ವರ್ಷದ ಯಶಸ್ವಿ ಜೈಸ್ವಾಲ್ ಸದ್ಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಇದೇ ಸಾಧನೆ ಮೆರೆದಿದ್ದಾರೆ. ಜೈಸ್ವಾಲ್ ರ ಉತ್ತಮ ಪ್ರದರ್ಶನದಿಂದಾಗಿ ಭಾರತ ತಂಡ 396 ರನ್ ಗಳಿಸಿದೆ.