ADVERTISEMENT
Wednesday, January 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ಜಮೀರ್‌ಗೆ ದೇಶ ರಾಜ್ಯಕ್ಕಿಂತ ಆಸಕ್ತಿ ಅದೊಂದರಲ್ಲೇ ಇದೆ : ಅಜೆಂಡಾ ಬಯಲಿಗೆಳೆದ ಯತ್ನಾಳ್

Jameer is more interested in the country than the state. Yatnal exposes Islamization agenda

Shwetha by Shwetha
January 2, 2026
in ರಾಜ್ಯ, Newsbeat, Politics, State, ರಾಜಕೀಯ
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸದಾ ತಮ್ಮ ಸ್ಪೋಟಕ ಹೇಳಿಕೆಗಳಿಂದಲೇ ಸಂಚಲನ ಮೂಡಿಸುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇದೀಗ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಕೋಗಿಲು ಲೇಔಟ್‌ನಲ್ಲಿ ಅಕ್ರಮ ನಿವಾಸಿಗಳಿಗೆ ಸರ್ಕಾರ ಮನೆ ಮಂಜೂರು ಮಾಡುತ್ತಿರುವ ವಿಚಾರವಾಗಿ ವಿಧಾನಸೌಧದಲ್ಲಿ ಕಿಡಿ ಕಾರಿರುವ ಯತ್ನಾಳ್, ಸಚಿವ ಜಮೀರ್ ಅಹ್ಮದ್ ಅವರಿಗೆ ದೇಶ ಮತ್ತು ರಾಜ್ಯದ ಹಿತಾಸಕ್ತಿಗಿಂತ ತಮ್ಮ ಸಮುದಾಯದ ಜನಸಂಖ್ಯೆ ಹೆಚ್ಚಿಸುವುದು ಮತ್ತು ಮತದಾರರ ಪಟ್ಟಿಯನ್ನು ಹಿಗ್ಗಿಸುವುದರಲ್ಲೇ ಹೆಚ್ಚಿನ ಆಸಕ್ತಿಯಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇಸ್ಲಾಮೀಕರಣದ ರಹಸ್ಯ ಅಜೆಂಡಾ

Related posts

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವಸ್ತ್ರ ಸಂಹಿತೆ ಜಾರಿ: ಸಾಂಪ್ರದಾಯಿಕ ಉಡುಗೆ ಕಡ್ಡಾಯ

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವಸ್ತ್ರ ಸಂಹಿತೆ ಜಾರಿ: ಸಾಂಪ್ರದಾಯಿಕ ಉಡುಗೆ ಕಡ್ಡಾಯ

January 21, 2026
ಫೈನಲ್‌ಗೆ ಎಂಟ್ರಿ ಪಡೆಯಲು RCBಗೆ ಇನ್ನೆಷ್ಟು ಗೆಲುವು ಬೇಕು?

ಫೈನಲ್‌ಗೆ ಎಂಟ್ರಿ ಪಡೆಯಲು RCBಗೆ ಇನ್ನೆಷ್ಟು ಗೆಲುವು ಬೇಕು?

January 21, 2026

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್, ಜಮೀರ್ ಅಹ್ಮದ್ ಖಾನ್ ಅವರ ತಲೆಯಲ್ಲಿ ಕೇವಲ ಈ ದೇಶವನ್ನು ಆದಷ್ಟು ಬೇಗ ಇಸ್ಲಾಮೀಕರಣ ಮಾಡಬೇಕು ಎನ್ನುವ ಒಂದೇ ಒಂದು ಟಾರ್ಗೆಟ್ ಇದೆ. ಅದನ್ನು ಬಿಟ್ಟರೆ ಅವರಿಗೆ ಅಭಿವೃದ್ಧಿಯ ಬಗ್ಗೆ ಯಾವುದೇ ಚಿಂತನೆಯಿಲ್ಲ. ತಮ್ಮ ಸಮುದಾಯದ ಮತದಾರರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಸರ್ಕಾರಿ ಸೌಲಭ್ಯಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ನೇರ ಆರೋಪ ಮಾಡಿದರು.

ಮುಖ್ಯಮಂತ್ರಿಗಳ ವಿರುದ್ಧ ಓಲೈಕೆ ಆರೋಪ

ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧವೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಯತ್ನಾಳ್, ಸಿದ್ದರಾಮಯ್ಯನವರಿಗೆ ಜಾತ್ಯತೀತ ಎನ್ನುವ ಮುಖವಾಡವಷ್ಟೇ ಇದೆ. ಆದರೆ ಅವರ ನೈಜ ಉದ್ದೇಶ ಮುಸ್ಲಿಂ ತುಷ್ಟೀಕರಣವಾಗಿದೆ. ಅವರಿಗೆ ಬೇರೆ ಸಮುದಾಯದ ಬಡವರ ಕಷ್ಟಗಳು ಕಾಣುತ್ತಿಲ್ಲ. ದಶಕಗಳಿಂದ ಉತ್ತರ ಕರ್ನಾಟಕದ ಭಾಗದಿಂದ ಎಷ್ಟೋ ಬಡವರು ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದು ಕೂಲಿ ನಾಲಿ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಅಂತಹ ನಿಜವಾದ ಕನ್ನಡಿಗರಿಗೆ ಮತ್ತು ಮಣ್ಣಿನ ಮಕ್ಕಳಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರಕ್ಕೆ ಮನಸ್ಸಿಲ್ಲ. ಆದರೆ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅನ್ಯರಿಗೆ ಮನೆ ಕೊಡಲು ಮುಂದಾಗಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ವಸತಿ ಹಂಚಿಕೆ ವಿಚಾರದಲ್ಲಿ ಕಾಂಗ್ರೆಸ್ ಹೈಕಮಾಂಡ್ ಸಿಎಂ ಹಾಗೂ ಡಿಸಿಎಂ ಅವರಿಗೆ ಎಚ್ಚರಿಕೆ ನೀಡಿದೆ, ಹೀಗಾಗಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ ಎಂದು ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮನೆ ಪಡೆಯುತ್ತಿರುವವರ ಪಟ್ಟಿಯಲ್ಲಿ ಬಾಂಗ್ಲಾದೇಶದವರು ಮತ್ತು ರೋಹಿಂಗ್ಯಾಗಳಂತಹ ಅಕ್ರಮ ನುಸುಳುಕೋರರು ಇರುವ ಬಲವಾದ ಶಂಕೆ ಇದೆ. ಸರ್ಕಾರ ಕೇವಲ ಮತಗಳ ಆಸೆಗಾಗಿ ದೇಶದ ಭದ್ರತೆಯನ್ನು ಕಡೆಗಣಿಸಿ, ಇವರ ಪೂರ್ವಾಪರ ಅಥವಾ ಪೌರತ್ವವನ್ನು ತನಿಖೆ ಮಾಡದೆಯೇ ಮನೆಗಳನ್ನು ಮಂಜೂರು ಮಾಡುತ್ತಿದೆ. ಇದನ್ನು ಬಿಜೆಪಿ ತೀವ್ರವಾಗಿ ವಿರೋಧಿಸುತ್ತದೆ. ಮೊದಲು ಫಲಾನುಭವಿಗಳು ಯಾವ ದೇಶದವರು ಎಂದು ತನಿಖೆಯಾಗಲಿ, ಆ ನಂತರವಷ್ಟೇ ಪುನರ್ವಸತಿಯ ಬಗ್ಗೆ ಯೋಚಿಸಲಿ ಎಂದು ಆಗ್ರಹಿಸಿದರು.

ಕನ್ನಡಿಗರಿಗೆ ಮಾಡುತ್ತಿರುವ ಅಪಮಾನ

ಕಾಂಗ್ರೆಸ್ ಹೈಕಮಾಂಡ್‌ಗೆ ತಲೆಬಾಗಿ ರಾಜ್ಯ ಸರ್ಕಾರ ಕನ್ನಡಿಗರಿಗೆ ಅಪಮಾನ ಮಾಡುತ್ತಿದೆ. ಸ್ಥಳೀಯರಲ್ಲದವರಿಗೆ, ಅಕ್ರಮವಾಗಿ ನೆಲೆಸಿರುವವರಿಗೆ ಮನೆಗಳನ್ನು ಕೊಡುವ ಮೂಲಕ ನಿಜವಾದ ಬಡ ಕನ್ನಡಿಗರ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಸರ್ಕಾರದ ಈ ನಡೆ ಖಂಡನೀಯ ಎಂದು ಯತ್ನಾಳ್ ಗರಂ ಆಗಿ ಪ್ರತಿಕ್ರಿಯಿಸಿದರು.

ಇದೇ ಸಂದರ್ಭದಲ್ಲಿ ರಾಜಕೀಯ ವಿದ್ಯಮಾನಗಳ ಬಗ್ಗೆಯೂ ಮಾತನಾಡಿದ ಯತ್ನಾಳ್, 2026ರಲ್ಲಿ ಬಿಜೆಪಿಯಲ್ಲಿ ಮಹತ್ವದ ಬದಲಾವಣೆಗಳಾಗುವ ಸುಳಿವು ನೀಡಿದರು. ಬಿಜೆಪಿಗೆ ನಾನು ವಾಪಸ್ ಬರಬೇಕು ಮತ್ತು ಮುಂಚೂಣಿಯಲ್ಲಿ ನಿಲ್ಲಬೇಕು ಎಂಬುದು ಅನೇಕ ಶಾಸಕರ ಅಭಿಪ್ರಾಯವಾಗಿದೆ. ಬೆಳಗಾವಿ ಅಧಿವೇಶನದಲ್ಲೂ ಶಾಸಕರು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಪ್ರಸ್ತುತ ಕೆಲ ನಾಯಕರು ಜನರನ್ನು ಸೇರಿಸಲು ಹಣ ಖರ್ಚು ಮಾಡಿ ಸುಸ್ತಾಗಿದ್ದಾರೆ. ಜನರನ್ನು ಆಕರ್ಷಿಸುವ ಶಕ್ತಿ ಇಲ್ಲದ ವ್ಯಕ್ತಿಗಳ ಮುಂದೆ ಜೋತು ಬೀಳಲು ಶಾಸಕರು ಇಷ್ಟಪಡುತ್ತಿಲ್ಲ. ನಾನು ಹೋದರೆ ಜನ ದುಡ್ಡು ಇಲ್ಲದೆಯೇ ಸ್ವಯಂಪ್ರೇರಿತರಾಗಿ ಸೇರುತ್ತಾರೆ. ಇದರಿಂದ ಶಾಸಕರಿಗೆ ಖರ್ಚು ಕಡಿಮೆಯಾಗುತ್ತದೆ. 2026ರಲ್ಲಿ ಯಾರಿಗೆ ಶುಭ ಸುದ್ದಿ ಸಿಗುತ್ತೋ, ಯಾರು ಮನೆಗೆ ಹೋಗುತ್ತಾರೋ ಅಥವಾ ಯಾರು ಮೇಲೆ ಹೋಗುತ್ತಾರೋ ಕಾದು ನೋಡಿ ಎಂದು ಮಾರ್ಮಿಕವಾಗಿ ನುಡಿದರು.

ShareTweetSendShare
Join us on:

Related Posts

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವಸ್ತ್ರ ಸಂಹಿತೆ ಜಾರಿ: ಸಾಂಪ್ರದಾಯಿಕ ಉಡುಗೆ ಕಡ್ಡಾಯ

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ವಸ್ತ್ರ ಸಂಹಿತೆ ಜಾರಿ: ಸಾಂಪ್ರದಾಯಿಕ ಉಡುಗೆ ಕಡ್ಡಾಯ

by Shwetha
January 21, 2026
0

ಉಡುಪಿಯ ಪ್ರಸಿದ್ಧ ಶ್ರೀ ಕೃಷ್ಣ ಮಠಕ್ಕೆ ಆಗಮಿಸುವ ಭಕ್ತರಿಗೆ ಇನ್ನು ಮುಂದೆ ಸಾಂಪ್ರದಾಯಿಕ ವಸ್ತ್ರ ಧಾರಣೆ ಕಡ್ಡಾಯವಾಗಲಿದೆ. ಧಾರ್ಮಿಕ ಪರಂಪರೆ, ಸಂಸ್ಕೃತಿ ಹಾಗೂ ಮಠದ ಗೌರವವನ್ನು ಕಾಪಾಡುವ...

ಫೈನಲ್‌ಗೆ ಎಂಟ್ರಿ ಪಡೆಯಲು RCBಗೆ ಇನ್ನೆಷ್ಟು ಗೆಲುವು ಬೇಕು?

ಫೈನಲ್‌ಗೆ ಎಂಟ್ರಿ ಪಡೆಯಲು RCBಗೆ ಇನ್ನೆಷ್ಟು ಗೆಲುವು ಬೇಕು?

by Shwetha
January 21, 2026
0

2026ರ ಮಹಿಳಾ ಪ್ರೀಮಿಯರ್ ಲೀಗ್‌ (WPL)ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಗೆಲುವಿನ ಸರಣಿ ಮುಂದುವರೆದಿದೆ. ಸ್ಮೃತಿ ಮಂಧಾನ ಅವರ ನಾಯಕತ್ವದಲ್ಲಿ ಆಡುತ್ತಿರುವ RCB ಈವರೆಗೆ...

ಶಬರಿಮಲೆ ತೀರ್ಥಯಾತ್ರೆ  ಸಂಪನ್ನ – ಭಕ್ತಿಭಾವದಿಂದ ಅಂತ್ಯಗೊಂಡ ಅಯ್ಯಪ್ಪ ಋತು

ಶಬರಿಮಲೆ ತೀರ್ಥಯಾತ್ರೆ ಸಂಪನ್ನ – ಭಕ್ತಿಭಾವದಿಂದ ಅಂತ್ಯಗೊಂಡ ಅಯ್ಯಪ್ಪ ಋತು

by Shwetha
January 21, 2026
0

ಕೇರಳದ ಪ್ರಸಿದ್ಧ ಪುಣ್ಯಕ್ಷೇತ್ರ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಈ ವರ್ಷದ ವಾರ್ಷಿಕ ತೀರ್ಥಯಾತ್ರೆಯ ಋತು ನಿನ್ನೆ ಭಕ್ತಿಭಾವಪೂರ್ಣವಾಗಿ ಅಂತ್ಯಗೊಂಡಿದೆ. ಸಾವಿರಾರು ಭಕ್ತರ ಸಾಕ್ಷಿಯಾಗಿ, ಸಾಂಪ್ರದಾಯಿಕ...

ರಾಜ್ಯ ರಾಜಕೀಯದ ಬಗ್ಗೆ ನಮ್ಮ ಮನೆಯಲ್ಲೇ 2 ಗಂಟೆ ಚರ್ಚೆ ನಡೆದಿದೆ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ

ರಾಜ್ಯ ರಾಜಕೀಯದ ಬಗ್ಗೆ ನಮ್ಮ ಮನೆಯಲ್ಲೇ 2 ಗಂಟೆ ಚರ್ಚೆ ನಡೆದಿದೆ: ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ

by Shwetha
January 21, 2026
0

ಬೆಂಗಳೂರು: ಕರ್ನಾಟಕ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುವಂತಹ ಹೇಳಿಕೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಪ್ರಿಯಾಂಕ್ ಖರ್ಗೆ ನೀಡಿದ್ದಾರೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಮತ್ತು ದಲಿತ...

ಅಮಾನತು ಮಾತ್ರವಲ್ಲ ಡಿಸ್ ಮಿಸ್ ಕೂಡ ಮಾಡ್ತೀವಿ ರಾಮಚಂದ್ರ ರಾವ್‌ಗೆ ನಡುಕ ಹುಟ್ಟಿಸಿದ ಗೃಹ ಸಚಿವರು‌

ಅಮಾನತು ಮಾತ್ರವಲ್ಲ ಡಿಸ್ ಮಿಸ್ ಕೂಡ ಮಾಡ್ತೀವಿ ರಾಮಚಂದ್ರ ರಾವ್‌ಗೆ ನಡುಕ ಹುಟ್ಟಿಸಿದ ಗೃಹ ಸಚಿವರು‌

by Shwetha
January 21, 2026
0

ಬೆಂಗಳೂರು: ಪೊಲೀಸ್ ಇಲಾಖೆಯ ಘನತೆ ಮತ್ತು ಗೌರವಕ್ಕೆ ಧಕ್ಕೆ ತರುವಂತಹ ಗಂಭೀರ ಆರೋಪಕ್ಕೆ ಗುರಿಯಾಗಿರುವ ಸಿಐಡಿ ಡಿಜಿಪಿ ರಾಮಚಂದ್ರ ರಾವ್ ಅವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram