ಗಾಲೆಯಲ್ಲಿ ಧೂಳೆಬ್ಬಿಸಿದ ಆಂಡರ್ಸನ್ : ಮೆಕ್ ಗ್ರಾತ್ ದಾಖಲೆ ಚಿಂದಿ ಚಿಂದಿ
ಗಾಲೆ : ಶ್ರೀಲಂಕಾ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ನ ಜೇಮ್ಸ್ ಆಂಡರ್ಸನ್ ಧೂಳೆಬ್ಬಿಸಿದ್ದಾರೆ.
ಈ ಪಂದ್ಯದಲ್ಲಿ 6 ವಿಕೆಟ್ ಪಡೆದ ಆಂಡರ್ಸನ್ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಬಾರಿ 5 ವಿಕೆಟ್ ಪಡೆದ 2ನೇ ವೇಗದ ಬೌಲರ್ ಎಂಬ ಚರಿತ್ರೆ ಸೃಷ್ಠಿಸಿದ್ದಾರೆ.
ಆಂಡರ್ಸನ್ 157ನೇ ಪಂದ್ಯದಲ್ಲಿ 30ನೇ ಬಾರಿ ಇನ್ನಿಂಗ್ಸ್ ಒಂದರಲ್ಲಿ 5 ವಿಕೆಟ್ ಪಡೆದಿದ್ದಾರೆ.
ಈ ಮೂಲಕ ಆಸ್ಟ್ರೇಲಿಯಾದ ಗ್ಲೇನ್ ಮೆಕ್ ಗ್ರಾತ್ ದಾಖಲೆ ಬ್ರೇಕ್ ಪುಡಿಗಟ್ಟಿದ್ದಾರೆ. ಮೆಕ್ ಗ್ರಾತ್ 124 ಪಂದ್ಯಗಳಲ್ಲಿ 29 ಬಾರಿ 5 ವಿಕೆಟ್ ಪಡೆದು ಮಿಂಚಿದ್ದರು.
ಇನ್ನು ಟೆಸ್ಟ್ ಕ್ರಿಕೆಟ್ ನ ವೇಗಿಗಳಲ್ಲಿ ಅತಿಹೆಚ್ಚು 5 ವಿಕೆಟ್ ಪಡೆದ ಆಟಗಾರರನ್ನು ಪಟ್ಟಿ ಹೀಗಿದೆ.
ನ್ಯೂಜಿಲ್ಯಾಂಡ್ ನ ರಿಚರ್ಡ್ ಹ್ಯಾಡ್ಲಿ 86 ಪಂದ್ಯಗಳಲ್ಲಿ 36 ಬಾರಿ 5 ವಿಕೆಟ್ ಪಡೆದು ಮೊದಲನೇ ಸ್ಥಾನದಲ್ಲಿದ್ದಾರೆ.
ಎರಡನೇ ಸ್ಥಾನದಲ್ಲಿ ಇಂಗ್ಲೆಂಡ್ ನ ಜೇಮ್ಸ್ ಆಂಡರ್ಸನ್ 30 ಬಾರಿ, ಆಸ್ಟ್ರೇಲಿಯಾದ ಮೆಕ್ ಗ್ರಾತ್ 29 ಬಾರಿ ಐದು ವಿಕೆಟ್ ಪಡೆದರು.
ಒಟ್ಟಾರೆ ಬೌಲರ್ ಗಳಲ್ಲಿ ನೋಡುವುದಾದ್ರೆ, ಶ್ರೀಲಂಕಾದ ಸ್ಪಿನ್ ಲೆಜೆಂಡ್ ಮುತ್ತಯ್ಯ ಮುರಳೀದರನ್ 67 ಬಾರಿ,
ಆಸೀಸ್ ಸ್ಪೀನ್ ಮಾಂತ್ರಿಕ ಶೇನ್ ವಾರ್ನ್ 37, ಭಾರತದ ಅನಿಲ್ ಕುಂಬ್ಳೆ 35 ಹಾಗೂ ಶ್ರೀಲಂಕಾದ ಹೆರಾತ್ 34 ಬಾರಿ ಐದು ವಿಕೆಟ್ ಪಡೆದಿರುವ ಸಾಧನೆ ಮಾಡಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channelp