ಹೈದರಾಬಾದ್ : ಲೋಕಸಭೆ ಚುನಾವಣೆಗೆ ಎಲ್ಲೆಡೆ ದಿನಗಣನೆ ಆರಂಭವಾಗಿದ್ದು, ಎಲ್ಲ ಪಕ್ಷಗಳು ಈಗಿನಿಂದಲೇ ತಂತ್ರ – ಪ್ರತಿತಂತ್ರ ಹೆಣೆಯುತ್ತಿವೆ, ಆದರೆ, ಎನ್ ಡಿಎ ಮೈತ್ರಿಕೂಟಕ್ಕೆ ಆರಂಭದಲ್ಲಿಯೇ ಎರಡನೇ ಶಾಕ್ ಎದುರಾಗಿದೆ.
ಒಂದೇ ವಾರದಲ್ಲಿ ಇಬ್ಬರು ಸ್ನೇಹಿತರು ಎನ್ ಡಿಎಗೆ ಕೈಗೊಟ್ಟಿದ್ದಾರೆ. ಎನ್‌ಡಿಎ ಮೈತ್ರಿಕೂಟಕ್ಕೆ ಕಳೆದ ವಾರವಷ್ಟೇ ತಮಿಳುನಾಡಿನ ಅಣ್ಣಾಡಿಎಂಕೆ (AIDMK) ಪಕ್ಷ ತೊರೆದಿತ್ತು. ಸದ್ಯ ಆಂಧ್ರಪ್ರದೇಶದಲ್ಲಿ ಜನಸೇನಾ ಪಕ್ಷ (JanaSena Party) ಕೂಡ ಬಿಜೆಪಿಗೆ (BJP) ಗುಡ್ ಬೈ ಹೇಳಿದೆ.
ಜಗನ್ ಸರ್ಕಾರದ ವಿರುದ್ಧ ಸಿಡಿದಿರುವ ನಟ ಪವನ್ ಕಲ್ಯಾಣ್ (Pawan Kalyan) ತೆಲುಗುದೇಶಂ ಜೊತೆಗೂಡಿ ಚುನಾವಣೆ ಎದುರಿಸಲು ಮುಂದಾಗಿದ್ದಾರೆ. ಕಷ್ಟದ ಸಂದರ್ಭದಲ್ಲಿ ಚಂದ್ರಬಾಬು ನಾಯ್ಡ (Chandrababu Naidu) ಜೊತೆ ಇರಲು ಎನ್‌ಡಿಎ ಮೈತ್ರಿಕೂಟ ತೊರೆದಿದ್ದೇನೆ ಎಂದು ಅಧಿಕೃತವಾಗಿ ಪವನ್ ಕಲ್ಯಾಣ್ ಹೇಳಿದ್ದಾರೆ. ಟಿಡಿಪಿ-ಜನಸೇನೆ ಮೈತ್ರಿಯಿಂದ ವೈಎಸ್‌ಆರ್ ಕಾಂಗ್ರೆಸ್ (YSR Congress) ಸೋಲಲಿದೆ ಎಂದು ಕೂಡ ಅವರು ಭವಿಷ್ಯ ನುಡಿದಿದ್ದಾರೆ.