ಕೆರಿಬಿಯನ್ ದೈತ್ಯನಿಗೆ ಆರ್ ಸಿಬಿ ಸಾರಥ್ಯ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವಕ್ಕೆ ವಿರಾಟ್ ಕೊಹ್ಲಿ ವಿದಾಯ ಘೋಷಣೆ ಮಾಡಿದ್ದೇ ಮಾಡಿದ್ದು, ವಿರಾಟ್ ಉತ್ತರಾಧಿಕಾರಿ ಯಾರು ಎಂಬ ಪ್ರಶ್ನೆ ಕ್ರೀಡಾವಲಯದಲ್ಲಿ ಗಿರಿಗಿಟ್ಟಲೇ ಹೊಡೆಯುತ್ತಿದೆ. ಆರಂಭದಲ್ಲಿ ಕೆ.ಎಲ್.ರಾಹುಲ್, ಮ್ಯಾಕ್ಸ್ ವೆಲ್, ಡೇವಿಡ್ ವಾರ್ನರ್, ಮನೀಶ್ ಪಾಂಡೆ, ಶ್ರೇಯಸ್ ಹೆಸರು ಕೇಳಿಬಂದರೂ ಯಾವುದೂ ಅಧಿಕೃತವಾಗಲಿಲ್ಲ. ಈ ಮಧ್ಯೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನ ಸ್ಥಾನಕ್ಕೆ ವಿಂಡೀಸ್ ನ ದೈತ್ಯ ಆಲ್ ರೌಂಡರ್ ಸೂಕ್ತ ಎಂದು ಟೀಂ ಇಂಡಿಯಾ ಮಾಜಿ ಆಟಗಾರ ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.
ಹಾಗಾದ್ರೆ ಯಾರು ಆ ಕೆರಿಬಿಯನ್ ದೈತ್ಯ ಅಂದರೇ.. ಅದಕ್ಕೆ ಉತ್ತರ ಜೇಸನ್ ಹೋಲ್ಡರ್..!!
ವೆಸ್ಟ್ ಇಂಡೀಸ್ ಆಲ್ ರೌಂಡರ್ ಹಾಗೂ ಸನ್ ರೈಸರ್ಸ್ ತಂಡದ ಮಾಜಿ ಆಟಗಾರ ಜೇಸನ್ ಹೋಲ್ಡರ್ ಆರ್ ಸಿಬಿ ನಾಯಕ ಚೆನ್ನಾಗಿರುತ್ತದೆ ಎಂದು ಚೋಪ್ರಾ ಸಲಹೆ ನೀಡಿದ್ದಾರೆ.
ಆರ್‌ಸಿಬಿ ತನ್ನ ಡ್ರಾಫ್ಟ್ ಆಟಗಾರರಾಗಿ ಮಾಜಿ ನಾಯಕ ವಿರಾಟ್ ಕೊಹ್ಲಿ, ಸ್ಟಾರ್ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಯುವ ಬೌಲರ್ ಮೊಹಮ್ಮದ್ ಸಿರಾಜ್ ಅವರನ್ನು ಉಳಿಸಿಕೊಂಡಿದೆ, ಈ ಮೂವರಲ್ಲಿ ವಿರಾಟ್ ಬಿಟ್ಟು, ಮ್ಯಾಕ್ಸಿ ಅಥವಾ ಸಿರಾಜ್ ಗೆ ನಾಯಕತ್ವ ನೀಡುವ ಅವಕಾಶಗಳು ತೀರಾ ಕಡಿಮೆ.
ಹೋಲ್ಡರ್ ಯಾಕೆ ನಾಯಕರಾಗಬೇಕು ಎನ್ನುವುದಾದರೇ, ಹೋಲ್ಡರ್ ಉತ್ತಮ ಆಲ್ ರೌಂಡರ್, ಅವರು ತಮ್ಮ ನಾಯಕತ್ವದಲ್ಲಿ ವಿಂಡೀಸ್ ತಂಡನ್ನು ಟಿ 20 ವಿಶ್ವ ಕಪ್ ನಲ್ಲಿ ಚಾಂಪಿಯನ್ ಆಗಿಸಿದ್ದಾರೆ. ಅನುಭವದೊಂದಿಗೆ ಟಿ 20 ಕ್ರಿಕೆಟ್‌ಗೆ ಬೇಕಾದ ಎಲ್ಲಾ ಕೌಶಲ್ಯಗಳನ್ನು ಹೊಂದಿದ್ದಾರೆ ಎಂದು ಚೋಪ್ರಾ ಹೇಳಿದ್ದಾರೆ.
ಆದಾಗ್ಯೂ, ಹೋಲ್ಡರ್ ಆರ್‌ಸಿಬಿಯಂತಹ ತಂಡವನ್ನು ಸಮರ್ಥವಾಗಿ ಮುನ್ನಡೆಸುತ್ತಾರೆ ಅನ್ನೋದಕ್ಕೆ ಹಲವು ಕಾರಣಗಳಿವೆ ಎಂದಿರುವ ಚೋಪ್ರಾ, ಹೇಗಾದರೂ ಮಾಡಿ ಆರ್‌ಸಿಬಿ ಫ್ರಾಂಚೈಸಿ ಹರಾಜಿನಲ್ಲಿ ಹೋಲ್ಡರ್ ಅವರನ್ನು ಖರೀದಿ, ನಾಯಕತ್ವ ನೀಡಬೇಕು ಎಂದು ಸಲಹೆ ನೀಡಿದ್ದಾರೆ.
ನ್ನು ಜೇಸನ್ ಹೋಲ್ಡರ್ ಇದುವರೆಗೆ 26 ಐಪಿಎಲ್ ಪಂದ್ಯಗಳಲ್ಲಿ 121 ಸ್ಟ್ರೈಕ್ ರೇಟ್ ನೊಂದಿಗೆ 189 ರನ್ ಗಳಿಸಿದ್ದಾರೆ. 8.20 ಎಕಾನಮಿಯಲ್ಲಿ 35 ವಿಕೆಟ್ ಗಳನ್ನು ಪಡೆದಿದ್ದಾರೆ.