ಕ್ಷಮೆ ಕೇಳುವ ತಪ್ಪು ಮಾಡಿಲ್ಲ, ನಾನ್ ಕ್ಷಮೆ ಕೇಳಲ್ಲ : ರಾಕ್ಲೈನ್ ವೆಂಕಟೇಶ್
ಬೆಂಗಳೂರು : ನಾನು ಯಾರ ಮನಸ್ಸನ್ನು ನೋಯಿಸುವ ಮನುಷ್ಯನಲ್ಲ. ಕುಮಾರಸ್ವಾಮಿಯವರ ಬಳಿ ಕ್ಷಮೆ ಕೇಳುವಂತಹ ತಪ್ಪನ್ನು ಮಾತುಗಳನ್ನು ನಾನು ಆಡಿಲ್ಲ ಎಂದು ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹೇಳಿದ್ದಾರೆ.
ನಿನ್ನೆ ಕುಮಾರಸ್ವಾಮಿ ಬಗ್ಗೆ ರಾಕ್ ಲೈನ್ ವೆಂಕಟೇಶ್ ಕಿಡಿಕಾರಿದ್ದರು. ಇದರಿಂದ ರೊಚ್ಚಿಗೆದ್ದ ಜೆಡಿಎಸ್ ಕಾರ್ಯಕರ್ತರು ರಾಕ್ ಲೈನ್ ವೆಂಕಟೇಶ್ ಮನೆ ಮುಂದೆ ಪ್ರತಿಭಟನೆ ನಡೆಸಿದರು.
ಇದರ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾತಾಡುವ ಸ್ವಾತಂತ್ರ್ಯ ಕೆಲವರಿಗೆ ಮಾತ್ರ ಇದೆಯಾ..? ನಾನು ಯಾರ ಮನಸ್ಸಿಗೂ ನೋವು ಮಾಡಿಲ್ಲ.
ನಾನು ಯಾರ ಮನಸ್ಸನ್ನು ನೋಯಿಸುವ ಮನುಷ್ಯನಲ್ಲ, ನನ್ನ ಹೇಳಿಕೆಯಿಂದ ಏನು ತಪ್ಪಾಗಿದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರ ಕಾರ್ಯಕರ್ತರು ನನ್ನ ಮನೆ ಮುಂದೆ ಪ್ರತಿಭಟನೆ ಮಾಡಲು ಬಂದಿದ್ದಾರೆ ಎಂದು ನನಗೆ ಗೊತ್ತಿಲ್ಲ, ಕುಮಾರಸ್ವಾಮಿಯವರ ಬಳಿ ಕ್ಷಮೆ ಕೇಳುವಂತಹ ತಪ್ಪನ್ನು ಮಾತುಗಳನ್ನು ನಾನು ಆಡಿಲ್ಲ ಎಂದು ಹೇಳಿದರು.
ಇನ್ನು ಎಲ್ಲ ಪಕ್ಷದವರೂ ನನ್ನನ್ನು ರಾಜಕಾರಣಕ್ಕೆ ಕರೆದಿದ್ರೂ ಹೋಗಿಲ್ಲ. ನಾನು ಮಂಡ್ಯ ಮತ್ತು ರಾಜ್ಯ ರಾಜಕಾರಣಕ್ಕೂ ನಾನು ಬರಲ್ಲ. ಈ ಹಿಂದೆಯೇ ರಾಜಕಾರಣಕ್ಕೆ ನಾನು ಬರಲ್ಲ ಅಂತ ಹೇಳಿದ್ದು, ಈಗ್ಯಾಕೆ ಬರಲಿ ಎಂದು ಪ್ರಶ್ನಿಸಿದರು.
ಇನ್ನು ನಾನು ಮೊದಲಿನಿಂದಲೂ ಅಂಬರೀಶ್ ಅವರ ಜೊತೆ ಚುನಾವಣೆಗೆ ಹೋಗಿದ್ದೇನೆ. ನಮ್ಮಿಬ್ಬರದ್ದು ಸುಮಾರು 20 ವರ್ಷಗಳ ಬಾಂಧವ್ಯ. ಕಾರಣಾಂತರಗಳಿಂದ ಸುಮಲತಾ ಅವರು ರಾಜಕಾರಣಕ್ಕೆ ಪ್ರವೇಶ ಮಾಡುವಂತಾಯ್ತು.
ಅಂಬರೀಶ್ ತೋರಿಸುತ್ತಿದ್ದ ಪ್ರೀತಿ ಮತ್ತು ಬಾಂಧವ್ಯಕ್ಕಾಗಿ ಸುಮಲತಾ ಚುನಾವಣೆಗೆ ನಿಂತಾಗ ಅವರ ಬೆನ್ನುಲಾಬಿಗೆ ನಿಂತಿದ್ದೆ ಹೊರತು ಬೇರಾವ ಕಾರಣಕ್ಕೂ ಅಲ್ಲ. ನಾನು ಯಾವತ್ತೂ ಸಹ ಮಂಡ್ಯ ರಾಜಕಾರಣಕ್ಕೆ ಹೋಗಿಲ್ಲ.
ಕಳೆದ ಎರಡು ವರ್ಷಗಳಿಂದ ಈ ರೀತಿಯ ಮಾತುಗಳ ಬಂದ್ರೂ ನಾನು ಎಲ್ಲಿಯೂ ರಾಜಕಾರಣಕ್ಕೆ ಸಂಬಂಧಿಸಿದ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.