ಅಲ್ಪಸಂಖ್ಯಾತ ಬಂಧುಗಳು ಜೆಡಿಎಸ್ ಪಕ್ಷವನ್ನು ನಂಬಿಲ್ಲ.. ನಂಬೋದಿಲ್ಲ
ಬೆಂಗಳೂರು : ಅಲ್ಪಸಂಖ್ಯಾತ ಬಂಧುಗಳು ಹಿಂದೆಯೂ ಜೆಡಿಎಸ್ ಪಕ್ಷವನ್ನು ನಂಬಿಲ್ಲ, ಮುಂದೆಯೂ ನಂಬಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ.
ಸಿಂದಗಿ-ಹಾನಗಲ್ ಉಪಚುನಾವಣಾ ಫಲಿತಾಂಶದಲ್ಲಿ ಜೆಡಿಎಸ್ ಪಕ್ಷ ಅತ್ಯಂತ ಹೀನಾಯವಾಗಿ ಸೋಲುಂಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಹಾನಗಲ್, ಸಿಂದಗಿ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡು ಹೀನಾಯ ಸೋಲು ಅನುಭವಿಸಿದ್ದಾರೆ ಎಂದು ಕುಟುಕಿದ್ದಾರೆ.
ಹೆಚ್ ಡಿ ದೇವೇಗೌಡ ಅವರು 10 ದಿನ ಬಂದು ಪ್ರಚಾರ ಮಾಡಿದ್ದರೂ ಹೀನಾಯ ಸೋಲು ಕಂಡಿದೆ. ಅವರ ಪಕ್ಷದ ಸ್ಥಾನ ಏನೆಂಬುದನ್ನು ಎರಡೂ ಕ್ಷೇತ್ರಗಳ ಮತದಾರರೇ ತೋರಿಸಿದ್ದಾರೆ, ನಾನು ಟಿಪ್ಪಣಿ ಮಾಡುವುದಿಲ್ಲ.
ಅಲ್ಪಸಂಖ್ಯಾತ ಬಂಧುಗಳು ಹಿಂದೆಯೂ ಜೆಡಿಎಸ್ ಪಕ್ಷವನ್ನು ನಂಬಿಲ್ಲ, ಮುಂದೆಯೂ ನಂಬಲ್ಲ. ಜೆಡಿಎಸ್ ಒಂದು ಅವಕಾಶವಾದಿ ಪಕ್ಷ ಎಂಬುದು ಅವರಿಗೆ ಗೊತ್ತಿದೆ.
ಹೀಗಾಗಿಯೇ ಬಹುತೇಕ ಅಲ್ಪಸಂಖ್ಯಾತ ಮತದಾರರು ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.