ಜೆಡಿಎಸ್ ನ ಮತ್ತೊಂದು ವಿಕೆಟ್ ಪತನ – HR ಶ್ರೀನಾಥ್ ರಾಜೀನಾಮೆ …
1 min read
ಜೆಡಿಎಸ್ ನ ಮತ್ತೊಂದು ವಿಕೆಟ್ ಪತನ – HR ಶ್ರೀನಾಥ್ ರಾಜೀನಾಮೆ …
ಪರಿಷತ್ ಚುನಾವಣೆಯ ಶ್ರೀನಿವಾಸ್ ಗೌಡ ಮತ್ತು ಗುಬ್ಬಿ ಶ್ರೀನಿವಾಸ್ ಅಡ್ಡ ಮತದಾನ ಮಾಡಿದ್ದು ಈಗಾಗಲೇ ಜೆಡಿಎಸ್ ನಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ಇದರ ಬೆನ್ನಲ್ಲೇ ಜೆಡಿಎಸ್ ನ ಮತ್ತೊಂದು ವಿಕೆಟ್ ಪತನವಾಗಲಿದೆ.
ಶೀಘ್ರದಲ್ಲೇ ಮತ್ತೊಬ್ಬ ಜೆಡಿಎಸ್ ಮುಖಂಡ ಎಚ್‌ಆರ್ ಶ್ರೀನಾಥ್ ಕಾಂಗ್ರೆಸ್ ಸೇರಲಿದ್ದಾರೆ. ಈಗಾಗಲೇ ಜೆಡಿಎಸ್ ರಾಜ್ಯಾಧ್ಯಕ್ಷರಿಗೆ ಪತ್ರ ಬರೆದು ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದಾರೆ.
ಗಂಗಾವತಿಯ ಮಾಜಿ ಪರಿಷತ್ ಸದಸ್ಯರಾದ ಶ್ರೀನಾಥ್ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನ ಬೆಂಗಳೂರಿನಲ್ಲಿ ಭೇಟಿಯಾಗಿ ಮತುಕತೆ ನಡೆಸಿದ್ದಾರೆ. ಮಾಜಿ ಸಂಸದ ಎಚ್‌ಜಿ ರಾಮುಲು ಅವರ ಪುತ್ರರಾದ ಎಚ್.ಆರ್. ಶ್ರೀನಾಥ್ ಕಳೆದ ವಿಧಾನ ಸಭಾ ಚುನಾವಣೆ ವೇಳೆ ಕಾಂಗ್ರೆಸ್‌ನಿಂದ ಜೆಡಿಎಸ್ ಸೇರಿದ್ದರು. ಈಗ ಮತ್ತೆ ಕಾಂಗ್ರೆಸ್ ಕದ ತಟ್ಟಿದ್ದಾರೆ.
ಇನ್ನೂ ಕೆಲವೇ ದಿನಗಳಲ್ಲಿ ನಾನು ಕಾಂಗ್ರೆಸ್ ಸೇರ್ತಿನಿ. ನಮ್ಮದು ಮೂಲತಃ ಕಾಂಗ್ರೆಸ್ ಕುಟುಂಬ ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರೊಂದಿಗೆ ನಮ್ಮ ತಂದೆಯ ಒಡನಾಟವಿತ್ತು. ಕಾಂಗ್ರೆಸ್ ನಲ್ಲಿ ನಮ್ಮ ತಂದೆ ಮುತ್ಸದ್ದಿ ರಾಜಕಾರಣಿ ಹೀಗಾಗಿ ನಾನು ಮತ್ತೆ ಗೂಡಿಗೆ ಮರಳಿರುವುದು ಸಂತೋಷವಾಗಿದೆ ಎಂದು ತಿಳಿಸಿದ್ದಾರೆ.