ಜೆಡಿಎಸ್ ನಲ್ಲಿ ಹಣವಿದ್ದವರಿಗೆ ಮಾತ್ರ ಟಿಕೆಟ್ – MLC ಮರಿತಿಬ್ಬೇಗೌಡ ವಾಗ್ದಾಳಿ…

1 min read

ಜೆಡಿಎಸ್ ನಲ್ಲಿ ಹಣವಿದ್ದವರಿಗೆ ಮಾತ್ರ ಟಿಕೆಟ್ – MLC ಮರಿತಿಬ್ಬೇಗೌಡ ವಾಗ್ದಾಳಿ…

ಜೆಡಿಎಸ್‍ನಲ್ಲಿ ಹಣವಿದ್ದರೇ ಮಾತ್ರ ಚುನಾವಣೆಗೆ ಟಿಕೆಟ್ ನೀಡ್ತಾರೆ, ಹಣ ಇಲ್ಲ ಅಂದ್ರೆ ಟಿಕೆಟ್ ಸಿಗೋಲ್ಲಾ ಎಂದು ಜೆಡಿಎಸ್‍ನ ಎಂಎಲ್‍ಸಿ ಮರಿತಿಬ್ಬೇಗೌಡ ಪಕ್ಷದ ನಾಯಕರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಈ ಮೂಲಕ ಮಂಡ್ಯದಲ್ಲಿ ಮತ್ತೊಂದು ಜೆಡಿಎಸ್ ವಿಕೆಟ್ ಪಥನಗೊಳ್ಳುವ  ಸಾಧ್ಯತೆ ಇದೆ, ಪದವಿಧರರ ಚುನಾವಣೆಯಲ್ಲಿ ತಮ್ಮದೆ ಪಕ್ಷದ ಅಭ್ಯರ್ಥಿಗೆ ಮತ ಹಾಕಬೇಡಿ ಅಂತಾ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮಂಡ್ಯದಲ್ಲಿ ಬೆಂಬಲಿಗರ ಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್.ಕೆ.ರಾಮುಗೆ ಮತ ಹಾಕದಂತೆ ಮನವಿ ಮಾಡಿದ್ದಾರೆ.

“ತಮ್ಮ ಆಪ್ತ ಕಿಲಾರ ಜಯರಾಂ ಅವರಿಗೆ ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆಗೆ ಟಿಕೆಟ್ ಕೇಳಿದಕ್ಕೆ ಆತನ ಬಳಿ ಹಣ ಇಲ್ಲ. ಅವನಿಗೆ ಟಿಕೆಟ್ ಬೇಡಾ ಎಂದು ಜೆಡಿಎಸ್ ವರಿಷ್ಠರು ಹೇಳಿದ್ದರು. ಇದಾದ ಬಳಿಕ ಪಕ್ಷದ ಬಾವುಟ ಹಿಡಿಯದ ಹೆಚ್.ಕೆ.ರಾಮುಗೆ ಟಿಕೆಟ್ ನೀಡಿದ್ದಾರೆ. ಈ ಮೂಲಕ ಜೆಡಿಎಸ್‍ನಲ್ಲಿ ಹಣವಿದ್ದವರಿಗೆ ಮಾತ್ರ ಟಿಕೆಟ್ ಕೊಡುವುದು ತಿಳಿಯುತ್ತದೆ. ಜೆಡಿಎಸ್‍ನಲ್ಲಿ ಪಕ್ಷದ ಕಾರ್ಯಕರ್ತರಿಗೆ ಯಾವುದೇ ಬೆಲೆ ಇಲ್ಲ, ಇಲ್ಲಿ ಹಣ ಇದ್ದವರಿಗೆ ಬೆಲೆ “ ಎಂದು ಮರಿತಿಬ್ಬೆಗೌಡ ವಾಗ್ದಾಳಿ ನಡೆಸಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd