ಕಲ್ಯಾಣ ಕರ್ನಾಟಕ ಜನರಿಗೆ ವಿದ್ಯುತ್ ಶಾಕ್ ಯುನಿಟ್ ಗೆ 1.50 ರೂ. ಹೆಚ್ಚಳ
ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ವಿದ್ಯುತ್ ಶಾಕ್ ನೀಡಲು ಜೆಸ್ಕಾಂ ಮುಂದಾಗಿದೆ. ಪ್ರತಿ ಯುನಿಟ್ ಗೆ 1.50 ರೂ. ವಿದ್ಯುತ್ ದರ ಹೆಚ್ಚಳ ಮಾಡುವಂತೆ ಜೆಸ್ಕಾಂನಿಂದ ಕೆ.ಇ.ಆರ್.ಸಿ.ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಂದೇ ವರ್ಷದಲ್ಲಿ ಮೂರು ಬಾರಿ ಜೆಸ್ಕಾಂ ದರ ಹೆಚ್ಚಳ ಮಾಡಿದ್ದು, ಈಗ ನಾಲ್ಕನೇ ಬಾರಿಗೆ ದರ ಹೆಚ್ಚಳ ಮಾಡಲು ಕೆ.ಇ.ಆರ್.ಸಿ.ಗೆ(ಕರ್ನಾಟಕ ಎಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಷನ್) ಪ್ರಸ್ತಾವನೆ ಸಲ್ಲಿಸಲಾಗಿದೆ.
ಜೆಸ್ಕಾಂನ ದರ ಹೆಚ್ಚಳ ಪ್ರಸ್ತಾವನೆಗೆ ಕಲ್ಯಾಣ ಕರ್ನಾಟಕನದ ಕೈಗಾರಿಕೆ ಸಂಘಟನೆಗಳು, ರೈತರು ಮತ್ತು ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಜೆಸ್ಕಾಂನ ಲೋಪಗಳಿಂದಲೇ ದರ ಹೆಚ್ಚಳ ಎಂದು ಆರೋಪಗಳು ಕೇಳಿ ಬಂದಿದ್ದು, ರಾಜ್ಯದ ವಿದ್ಯುತ್ ನಿಗಮಗಳ ಪೈಕಿ ಜೆಸ್ಕಾಂನಲ್ಲಿಯೇ ಅತೀ ಹೆಚ್ಚು ದರ ನಿಗದಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೆ ಮೆಸ್ಕಾಂ ಹೆಸ್ಕಾಂ ಮತ್ತು ಬೆಸ್ಕಾಂ ಸಹ ಯನಿಟ್ ಗೆ 1.50 ರೂ ಹೆಚ್ಚಳ ಮಾಡುವಂತೆ ಕರ್ನಾಟಕ ಎಲೆಕ್ಟ್ರಿಸಿಟಿ ರೆಗ್ಯುಲೇಟರಿ ಕಮಿಷನ್ ಗೆ ಮನವಿ ಸಲ್ಲಿಸಿವೆ, ಆದರೆ ಕೆಇಆರ್ ಸಿ ಇದನ್ನ ಎಷ್ಟರ ಮಟ್ಟಿಗೆ ಅಂಗಿಕರಿಸುತ್ತೆ ಮತ್ತು ಎಷ್ಟು ಪಟ್ಟು ಏರಿಕೆ ಮಾಡುತ್ತೆ ಅನ್ನುವುದು ಕೆಇಆರ್ ಸಿ ನಿರ್ಧಾರದ ಮೇಲೆ ನಿಂತಿದೆ.








