ಬಾಂದ್ರಾದಲ್ಲಿ ಡ್ಯೂಪ್ಲೆಕ್ಸ್ ಹೌಸ್ ಖರೀದಿಸಿದ ನಟ ಜಾನ್ವಿ ಕಪೂರ್
ಬಾಲಿವುಡ್ ನಟಿ ಜಾನ್ವಿ ಕಪೂರ್ ಇತ್ತೀಚೆಗೆ ಮುಂಬೈನ ಬಾಂದ್ರಾ ಪ್ರದೇಶದಲ್ಲಿ ಡ್ಯೂಪ್ಲೆಕ್ಸ್ ಮನೆಯನ್ನ ಖರೀದಿಸಿದ್ದಾರೆ. ಸುಮಾರು 65 ಕೋಟಿ ರುಪಾಯಿ ಮೌಲ್ಯದ ಈ ಬಂಗಲೆಯನ್ನು ನಟಿ ಜಾನ್ವಿ ಅಕ್ಟೋಬರ್ 12 ರಂದು ಖರೀದಿಸಿದ್ದಾರೆ. ಇದಕ್ಕಾಗಿ ಅವರು ಸ್ಟ್ಯಾಂಪ್ ಡ್ಯೂಟಿ ಮತ್ತು 3.90 ಕೋಟಿ ರೂಪಾಯಿ ನೋಂದಣಿ ಶುಲ್ಕವನ್ನು ಪಾವತಿಸಿದ್ದಾರೆ.
ಜಾನ್ವಿ ಈ ಡ್ಯುಪ್ಲೆಕ್ಸ್ ನಲ್ಲಿ 5 ಕಾರ್ ಪಾರ್ಕಿಂಗ್ ಪ್ರದೇಶವನ್ನು ಪಡೆದುಕೊಂಡಿದ್ದಾರೆ.
ಜಾನ್ವಿಯ ಈ ಡ್ಯೂಪ್ಲೆಕ್ಸ್ ಹೌಸ್ 8,669 ಚದರ ಅಡಿಗಳಷ್ಟು ವಿಸ್ತಾರವಾಗಿದೆ. ಮನೆಯ ಹೊರತಾಗಿ, ಇದು ಖಾಸಗಿ ಉದ್ಯಾನ, ಈಜುಕೊಳ ಮತ್ತು 5 ಕಾರ್ ಪಾರ್ಕಿಂಗ್ ಪ್ರದೇಶವನ್ನ ಹೊಂದಿದೆ.
ಹಳೆ ಮನೆ ರಾಜ್ ಕುಮಾರ್ ರಾವ್ ಗೆ ಮಾರಾಟ
ಜಾನ್ವಿ ಕಪೂರ್ 3456 ಚದರ ಅಡಿ ವಿಸ್ತೀರ್ಣದ ತನ್ನ ಹಳೆಯ ಮನೆಯನ್ನು ಈ ವರ್ಷ ಜುಲೈನಲ್ಲಿ ಮಾರಾಟ ಮಾಡಿದ್ದಾರೆ. ಡಿಸೆಂಬರ್ 2020 ರಲ್ಲಿ ಜುಹುದಲ್ಲಿ ಈ ಟ್ರಿಪ್ಲೆಕ್ಸ್ ಮನೆಯನ್ನು 39 ಕೋಟಿ ರೂಪಾಯಿಗಳಿಗೆ ಖರೀದಿಸಿದರು, ಅದನ್ನು ಅವರು ಇತ್ತೀಚೆಗೆ ರಾಜ್‌ಕುಮಾರ್ ರಾವ್ ಅವರಿಗೆ 44 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿದರು. ಕಳೆದ 2 ವರ್ಷಗಳಲ್ಲಿ ಜಾನ್ವಿ 3 ರಿಯಲ್ ಎಸ್ಟೇಟ್ ವ್ಯವಹಾರಗಳನ್ನು ಮಾಡಿದ್ದಾರೆ.
Jhanvi Kapoor Mumbai Bandra Duplex Price, Address