ಜೋಗಿ ಪ್ರೇಮ್ – ಸಿದ್ದರಾಮಯ್ಯ ಭೇಟಿ | ಏನಿರಬಹುದು..?
ಸಿನಿಮಾ ಮಂದಿ ರಾಜಕೀಯ ಪ್ರವೇಶಿಸೋದು ಸರ್ವೇ ಸಾಮಾನ್ಯ. ಇತ್ತೇಚೆಗೆ ಕನ್ನಡ ಚಿತ್ರರಂಗದವರು ಪರೋಕ್ಷ, ಪ್ರತ್ಯೇಕ್ಷವಾಗಿ ರಾಜಕೀಯ ಪಕ್ಷಗಳ ಜೊತೆ ಗುರುತಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಸಾಕಷ್ಟು ನಿದರ್ಶನಗಳು ನಮ್ಮ ಮುಂದೆ ಇದೆ. jogi prem meets siddaramaiah
ಇದು ಹೀಗಿದ್ದರೇ ಇದೀಗ ಸ್ಟಾರ್ ಡೈರಕ್ಟರ್ ಜೋಗಿ ಪ್ರೇಮ್ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನ ಭೇಟಿಯಾಗಿದ್ದಾರೆ.
ಸಿದ್ದರಾಮಯ್ಯ ಅವರನ್ನ ಜೋಗಿ ಪ್ರೇಮ್ ಭೇಟಿಯಾಗಿರುವುದು ಒಂದಿಷ್ಟು ಕುತೂಹಲಕ್ಕೆ ಕಾರಣವಾಗಿದೆ. ಏನಪ್ಪಾ ಜೋಗಿ ಪ್ರೇಮ್ ಏನಾದ್ರೂ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಅಂತ ಅನ್ಕೊಂಡ್ರೆ ಅದು ತಪ್ಪಾಗುತ್ತೆ. ಯಾಕಂದರೆ ಜೋಗಿ ಪ್ರೇಮ್, ಸಿದ್ದರಾಮಯ್ಯ ಅವರನ್ನ ಭೇಟಿಯಾಗಿರೋದು ರಾಜಕೀಯ ವಿಚಾರಕ್ಕೆ ಅಲ್ಲ. ಬದಲಾಗಿ ಸಿನಿಮಾ ವಿಚಾರಕ್ಕೆ..!!
ಹೌದು..! ನಿರ್ದೇಶಕ ಪ್ರೇಮ್ ಸದ್ಯ ಏಕ್ ಲವ್ ಯಾ ಸಿನಿಮಾದಲ್ಲಿ ಬುಸಿಯಾಗಿದ್ದಾರೆ. ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ಪ್ರೇಮ್, ಸಿದ್ದರಾಮಯ್ಯ ಅವರನ್ನ ಭೇಟಿಯಾಗಿ, ಸಿನಿಮಾವನ್ನ ವೀಕ್ಷಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ಇತ್ತ ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕನ್ನಡ ಚಲನಚಿತ್ರ ನಟ, ನಿರ್ದೇಶಕ ಪ್ರೇಮ್ ಅವರು ಇಂದು ನನ್ನನ್ನು ಭೇಟಿ ಮಾಡಿ, ತಮ್ಮ “ಏಕ್ ಲವ್ ಯಾ” ಚಿತ್ರ ವೀಕ್ಷಿಸಲು ಆಹ್ವಾನಿಸಿದರು. ಚಿತ್ರ ತಂಡಕ್ಕೆ ಶುಭವಾಗಲಿ, ಚಿತ್ರ ಬಹುದಿನಗಳ ಕಾಲ ಯಶಸ್ವಿ ಪ್ರದರ್ಶನ ಕಾಣಲಿ ಎಂದು ಮನದುಂಬಿ ಹಾರೈಸಿದ್ದಾರೆ.
ಅಂದಹಾಗೆ ಸಿದ್ದರಾಮಯ್ಯ ಈ ಹಿಂದೆ ದಿ ವಿಲನ್ ಸಿನಿಮಾದ ಸಂದರ್ಭದಲ್ಲೂ ಪ್ರೇಮ್, ಸಿದ್ದರಾಮಯ್ಯ ಅವರನ್ನ ಭೇಟಿಯಾಗಿದ್ದರು.