ಪೊಲೀಸ್ ಜೀಪ್ ನಲ್ಲಿ ಕೆಆರ್ ಎಸ್ ಡ್ಯಾಂ ಮೇಲೆ ಜಾಲಿ ರೈಡ್
ಮಂಡ್ಯ : ಭದ್ರತೆ ದೃಷ್ಠಿಯಿಂದ ಕೆಆರ್ ಎಸ್ ಡ್ಯಾಂ ಮೇಲೆ ಯಾರೂ ಸಂಚರಿಸದಂತೆ ನಿರ್ಬಂಧ ವಿಧಿಸಲಾಗಿದೆ.
ಆದ್ರೆ ಈ ನಿಯಮವನ್ನು ಉಲ್ಲಂಘಿಸಿ ಸರ್ಕಾರಿ ವಾಹನದಲ್ಲಿ ಯುವಕನೊರ್ವ ಕೆ ಆರ್ ಎಸ್ ಡ್ಯಾಂ ಮೇಲೆ ಜಾಲಿ ಡ್ರೈವ್ ಮಾಡಿದ್ದಾನೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.
ಯುವಕನ ಜಾಲಿ ರೈಡ್ ಗೆ ಪೊಲೀಸ್ ಅಧಿಕಾರಿಯೇ ಸಾಥ್ ನೀಡಿದ್ದು, ಯುವಕ ಜೀಪ್ ಚಲಾಯಿಸುತ್ತಿದ್ದರೇ ಪಕ್ಕದಲ್ಲಿ ಕುಳಿತ ಪೊಲೀಸ್ ಅಧಿಕಾರಿ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ.
ಸಾರ್ವಜನಿಕರಿಗೆ ನಿಬರ್ಂಧ ವಿಧಿಸಿದ್ರೂ ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಯೇ ಈ ರೀತಿ ನಿಯಮ ಉಲ್ಲಂಘನೆ ಮಾಡಿರುವುದು ಭಾರಿ ಟೀಕೆ ಕಾರಣವಾಗಿದೆ. ಅಲ್ಲದೇ ಅಧಿಕಾರಿ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.