ಅಮೇಜಾನ್ ಕಾಡಿನಲ್ಲಿ ಹುಳತಿಂದು ಸ್ವ ಮೂತ್ರ ಕುಡಿದು 31 ದಿನ ಬದುಕುಳಿದ ವ್ಯಕ್ತಿ…
ಆಮೇಜಾನ್ ಕಾಡಿನಲ್ಲಿ ಭೇಟೆಯಾಡಲು ಪ್ರವಾಸಕ್ಕೆಂದು ತೆರಳಿದ್ದ ವ್ಯಕ್ತಿ ದಾರಿತಪ್ಪಿ 31 ದಿನಗಳ ಕಾಲ ಕಾಡಿನಲ್ಲಿ ಕಳೆದುಹೋಗಿದ್ದಾನೆ. ಬದುಕಲು ಹುಳುಗಳನ್ನ ತಿಂದು ದಾಹಕ್ಕಾಗಿ ಸ್ವಂತ ಮೂತ್ರವನ್ನೇ ಕುಡಿದು ಬದುಕುಳಿದಿದ್ದಾನೆ. ಕೊನೆಗೂ ಆತನನ್ನ ಅಮೇಜಾನ್ ಕಾಡಿನಿಂದ ರಕ್ಷಿಸಲಾಗಿದೆ.
30 ವರ್ಷದ ಜೊನಾಟನ್ ಅಕೋಸ್ಟಾ ಎಂಬ ವ್ಯಕ್ತಿ ನಾಲ್ವರು ಸ್ನೇಹಿತರೊಂದಿಗೆ ಬೇಟೆಯಾಡಲು ಅಮೇಜಾನ್ ಕಾಡಿಗೆ ತೆರಳಿದ್ದಾಗ ತಂಡದಿಂದ ಬೇರ್ಪಟ್ಟಿದ್ದಾನೆ ಎಂದು ಎಂದು ಬೊಲಿವಿಯನ್ ಸ್ಪ್ಯಾನಿಷ್ ಭಾಷೆಯ ಪತ್ರಿಕೆ ಪಜಿನಾ ಸಿಯೆಟ್ ವರದಿ ಮಾಡಿದೆ.
ಬಿಬಿಸಿ ವರದಿ ಪ್ರಕಾರ ಜೊನಾಟನ್ ಹುಳುಗಳನ್ನ ತಿಂದು, ಶೂಗಳಲ್ಲಿ ಸಂಗ್ರಹಿಸಿದ್ದ ಮಳೆನೀರು ಕುಡಿದು, ಮತ್ತು ಮಳೆನೀರು ಖಾಲಿಯಾದಾಗ, ಸ್ವತಃ ತನ್ನ ಮೂತ್ರವನ್ನೇ ಕುಡಿದು ಬದುಕುಳಿದಿದ್ದಾನೆ ಎಂದು ತಿಳಿದುಬಂದಿದೆ.
ಜೊನಾಟನ್ ಅಕೋಸ್ಟಾ ಕಾಡಿನಲ್ಲಿ ಅಲೆಯುವಾಗ ಜಾಗ್ವರ್ ಗಳು ಮತ್ತು ಕಾಡುಹಂದಿಗಳಿಂದ ತಪ್ಪಿಸಿಕೊಂಡು ಪರಾರಿಯಾಗಿ ಬದುಕುಳಿದಿದ್ದಾನೆ. ಕಣ್ಮರೆಯಾದ 31 ದಿನಗಳ ನಂತರ ಹುಡುಕಾಟದ ತಂಡದ ಕಣ್ಣಿಗೆ ಬಿದ್ದಿದ್ದಾನೆ. ಇಲ್ಲಿಯವೆರೆಗ ಸುಮಾರು 37 ಪೌಂಡ್ ತೂಕವನ್ನ ಕಳೆದುಕೊಂಡಿದ್ದಾನೆ.
A man who survived by eating insects and drinking urine for a month
Jonathan Acosta: The man who ate worms and drank his own urine survived for 31 days in the Amazon jungle.