Jote Joteyali : ಮುಕ್ತಾಯ ಹಂತ ತಲುಪಿದ ಜೊತೆ ಜೊತೆಯಲಿ ಧಾರಾವಾಹಿ…
ಆರಂಭದಲ್ಲಿ ಜನರಿಂದ ಸಾಕಷ್ಟು ಮೆಚ್ಚುಗೆ ಗಳಿಸಿ , ಟಿಆರ್ ಪಿ ಯಲ್ಲಿ ಟಾಪ್ ರ್ಯಾಂಕಿಂಗ್ ನಲ್ಲಿದ್ದ ದಾರಾವಾಹಿ ಜೊತೆ ಜೊತೆಯಲಿ.. ಈ ಧಾರವಾಹಿ ಆರಂಭದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟುಹಾಕಿತು.. ಬರ ಬರುತ್ತಾ ಸಾಕಷ್ಟು ವಿವಾದಗಳಿಂದ ಸುದ್ದಿಯಾಯ್ತು.
ಕಥೆ ಬೋರಿಂಗ್ ಅನ್ಸೋದಕ್ಕೆ ಶುರುವಾಯ್ತು.. ಇದೀಗ ಆರ್ಯವರ್ಧನ್ ಪಾತ್ರದಲ್ಲಿ ಗಮನ ಸೆಳೆದಿದ್ದ ಅನಿರುದ್ಧ ಅವರು ಧಾರವಾಹಿಯಿಂದ ಹೊರಗುಳಿದ ಮೇಲೆ ಇನ್ನಷ್ಟು ಈ ದಾರವಾಹಿಯ ಕಥೆ ಜನರಿಗೆ ಗೊಂದಲಮಯವೆನಿಸುತ್ತಾ ಹೋಗುತ್ತಿದೆ ಎಂಬುದು ಹಲವರ ಅಭಿಪ್ರಾಯ.. ಅನಿರುದ್ಧ ಅವರ ಬದಲಾಗಿ ಹರೀಶ್ ರಾಜ್ ಅವರು ಒಂದು ಹೊಸ ಪಾತ್ರದಂತೆಯೇ ಧಾರಾವಹಿಗೆ ಎಂಟ್ರಿ ಕೊಟ್ಟಿದ್ದಾರೆ.. ಇದೀಗ ಈ ದಾರವಾಹಿ ಮುಕ್ತಾಯದ ಹಂತ ತಲುಪಿದ್ದು , ಶೀಘ್ರದಲ್ಲೇ ಧಾರವಾಹಿ ಮುಗಿಯಲಿದೆ ಎನ್ನಲಾಗುತ್ತಿದೆ.
ಇನ್ನೂ Zee Kannada ದಲ್ಲಿ ಹೊಸ ಧಾರವಾಹಿಗಳು ಶೀಘ್ರದಲ್ಲೇ ಆರಂಭವಾಗಲಿದೆ.
ಆರೂರ್ ಜಗದೀಶ್ ನಿರ್ಮಾಣದ ಮತ್ತೊಂದು ಧಾರಾವಾಹಿ ‘ಭೂಮಿಗೆ ಬಂದ ಭಗವಂತ’ ಪ್ರಸಾರಕ್ಕೆ ಸಿದ್ಧವಾಗಿದೆ. ನವೀನ್ ಕೃಷ್ಣ ಮತ್ತು ರಾಧಾ ಕಲ್ಯಾಣದ ಕೃತಿಕಾ ರವೀಂದ್ರ ಮುಖ್ಯಭೂಮಿಯಲ್ಲಿರುವ ಈ ಧಾರವಾಹಿಯ ಪ್ರೊಮೊ ಈಗಾಗಲೇ ಬಿಡುಗಡೆಗೊಂಡಿದ್ದು ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಇನ್ನೊಂದೆಡೆ ಮಂಗಳಗೌರಿ ಖ್ಯಾತಿಯ ಗಗನ್ ಚಿನ್ನಪ್ಪ ಮತ್ತು ಅಗ್ನಿಸಾಕ್ಷಿ ಖ್ಯಾತಿಯ ವೈಷ್ಣವಿ ಗೌಡ ನಟನೆಯ ಸೀತಾ ರಾಮ ಧಾರಾವಾಹಿಯ ಪ್ರೊಮೊ ಬಿಡುಗಡೆಯಾಗಿದ್ದು ವೀಕ್ಷಕರು ಕಾತರತೆ ಹೆಚ್ಚಿಸಿದೆ. ಸತ್ಯ ಧಾರಾವಾಹಿ ಖ್ಯಾತಿಯ ಸ್ವಪ್ನ ಕೃಷ್ಣ ನಿರ್ದೇಶನದ ಈ ಧಾರಾವಾಹಿ ಕೂಡ ಪ್ರಸಾರಕ್ಕೆ ಸಿದ್ಧವಾಗಿದೆ.
Jote Joteyali : The serial that has reached its final stage…







