ದೇವರ ಚಿತ್ರದ ಹಾಡುಗಳಿಗೆ ಕಾಯುತ್ತಿದ್ದ ಅಭಿಮಾನಿಗಳಿಗೆ ಖುಷಿಯ ಸುದ್ದಿಯೊಂದು ಹೊರ ಬಿದ್ದಿದೆ. ಜ್ಯೂ. ಎನ್ ಟಿಆರ್(Jr.Ntr) ಜೊತೆ ಜಾನ್ವಿ ಕಪೂರ್(Janhvi Kapoor) ಸೊಂಟ ಬಳಕಿಸಿದ್ದು, ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದೆ.
‘ದೇವರ’ (Devara Film) ಸಿನಿಮಾದ ರೊಮ್ಯಾಂಟಿಕ್ ಹಾಡು ಬಿಡುಗಡೆಯಾಗಿದೆ. ‘ಸ್ವಾತಿಮುತ್ತೇ ಸಿಕ್ಕಂಗೈತೆ’ ಎಂದು ಜ್ಯೂ.ಎನ್‌ಟಿಆರ್ ಗೆ ಜಾನ್ವಿ ಹೇಳಿ ಸೊಂಟ ಬಳುಕಿಸಿದ್ದಾರೆ.
ಥೈಲ್ಯಾಂಡ್ ಕಾಡಿನ ಸುಂದರ ಜಾಗವೊಂದರಲ್ಲಿ ದೇವರ ಸಾಂಗ್ ಶೂಟ್ ಮಾಡಲಾಗಿತ್ತು. ಕನ್ನಡ ವರ್ಷನ್‌ನಲ್ಲಿ ಮೂಡಿ ಬಂದಿರುವ ‘ಸ್ವಾತಿಮುತ್ತೇ ಸಿಕ್ಕಂಗೈತೆ ಹುಡುಗನ ಹುರುಪು’ ಹಾಡಿನಲ್ಲಿ, ಸಖತ್ ಹಾಟ್ ಆಗಿ ತಾರಕ್ ಜೊತೆ ಜಾನ್ವಿ ಸೊಂಟ ಬಳುಕಿಸಿದ್ದಾರೆ. ಇದನ್ನು ಕಂಡು ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
ಹಾಡಿನಲ್ಲಿ ಜಾನ್ವಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಆ ಲುಕ್‌ನಲ್ಲಿ ಮೋಡಿ ಮಾಡಿದ್ದಾರೆ. ತಾರಕ್ ಮತ್ತು ಕೆಮಿಸ್ಟ್ರಿ ಪಡ್ಡೆಹುಡುಗರ ಮನ ಗೆದ್ದಿದೆ. ಸಾಂಗ್ ರಿಲೀಸ್ ಕೆಲವೇ ಹೊತ್ತಿನಲ್ಲಿ ಮಿಲಿಯನ್ ಗಟ್ಟಲೇ ವಿವ್ಸ್ ಪಡೆದಿದೆ. ಈ ಚಿತ್ರ ಸೆಪ್ಟೆಂಬರ್ 27ರಂದು ಬಹು ಭಾಷೆಯಲ್ಲಿ ಬಿಡುಗಡೆಯಾಗಲಿದೆ.
ಜ್ಯೂ.ಎನ್‌ಟಿಆರ್ ಡಬಲ್ ರೋಲ್ ನಲ್ಲಿ ನಟಿಸಿದ್ದಾರೆ. ಜಾನ್ವಿ ಕಪೂರ್, ಸೈಫ್ ಅಲಿ ಖಾನ್, ಚೈತ್ರಾ ರೈ ಸೇರಿದಂತೆ ಹಲವರು ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.