ಭಾರತ ಕಿರಿಯರ ತಂಡ ಚಾಂಪಿಯನ್ ಜೂನಿಯರ್ ಹಾಕಿ ತಂಡ ಏಷ್ಯಾ ಹಾಕಿ ಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಗೆಲುವಿನೊಂದಿಗೆ ಭರತ ಕಿರಿಯರ ತಂಡ ನಾಲ್ಕನೆ ಬಾರಿಗೆ ಪ್ರಶಸ್ತಿ ಎತ್ತಿ ಹಿಡಿದಿದೆ. 2004, 2008, ಮತ್ತು 2015ರಲ್ಲಿ ಚಾಂಪಿಯನ್ ಆಗಿತ್ತು.
ಫೈನಲ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತ ಕಿರಿಯರ ತಂಡ 2-1 ಗೋಲುಗಳಿಂದ ಗೆಲುವು ಸಾಧಿಸಿತು.
ಭಾರತ ಪರ ಅನಗಾದ್ ಭಿರ್ ಸಿಂಗ್ (13ನೇ ನಿಮಿ0, ಅರ್ಜೀತ್ ಸಿಂಗ್ ಹುಂಡಾಲ್ (20ನೇ ನಿಮಿಷ) ಗೋಲುಗಳನ್ನು ಹೊಡೆದರು. ಪಾಕ್ ಪರ ಅಬ್ದುಲ್ ಬಾಶರತ್ (37ನೇ ನಿಮಿಷ) ಏಕೈಕ ಗೋಲು ಹೊಡೆದರು.
ಪಂದ್ಯದ ಆರಂಭದಲ್ಲೆ ಹಿಡಿತ ಸಾಧಿಸಿದ ಭಾರತ ಪೆನಾಲ್ಟಿ ಅವಕಾಶ ಪಡೆಯಿತು. ಆದರೆ ಪೆನಾಲ್ಟಿಯನ್ನು ಗೋಲನ್ನಾಗಿ ಪರವರ್ತಿಸುವಲ್ಲಿ ಎಡವಿತು. ಅನ್ಗಾದ್ ಭಿರ್ ಸಿಂಗ್ ಗೋಲು ಹೊಡೆದು ಮುನ್ನಡೆ ನೀಡಿದರು. ನಂತರ ಯುವ ಪ್ರತಿಭಾನ್ವಿತಾ ಆಟಗಾರ ಹುಂಡಾಲ್ 2-0 ಅಂತರ ಹೆಚ್ಚಿಸಿದರು. ಪಾಕ್ ತಂಡ ಒತ್ತಡ ಹಾಕಿದರೂ ಗೋಲು ಹೊಡೆಯುವಲ್ಲಿ ವಿಫಲವಾಯಿತು. 37ನೇ ನಿಮಿಷದಲ್ಲಿ ಅಬ್ದುಲ್ ಶಾಹೀದ್ ಗೋಲು ಹೊಡೆದರು. ನಿಣ್ಯಾಕ ಕೊನೆಯ ಕ್ವಾರ್ಟರ್ನಲ್ಲಿ ಪಾಕ್ ದಾಳಿ ಮಾಡಿ ಮೂರು ಪೆನಾಲ್ಟಿ ಪಡೆದರೂ ಪ್ರಯೋಜನವಾಗಲಿಲ್ಲ.